ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ತಾಲಿಬಾನ್' ದಮನಕ್ಕೆ ಜಾಗತಿಕ ಬೆಂಬಲ ಅಗತ್ಯ: ಅಮೆರಿಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ತಾಲಿಬಾನ್' ದಮನಕ್ಕೆ ಜಾಗತಿಕ ಬೆಂಬಲ ಅಗತ್ಯ: ಅಮೆರಿಕ
ತಮ್ಮನ್ನು ವಿರೋಧಿಸಿದವರ ಮ‌ೂಗು, ಕಿವಿಗಳನ್ನು ಕತ್ತರಿಸುವ ಭಯಾನಕ ಕುಕೃತ್ಯಗಳಲ್ಲಿ ನಿರತವಾದ ತಾಲಿಬಾನ್ ಉಗ್ರಗಾಮಿಗಳ ದಮನಕ್ಕೆ ಅಂತಾರಾಷ್ಟ್ರೀಯ ಸಮುದಾಯ ಜತೆಗೂಡಬೇಕೆಂದು ಅಮೆರಿಕ ಬಯಸಿದೆ.

ತಾಲಿಬಾನ್ ತೊಡಗಿರುವ ಆಚರಣೆಗಳು ಭಯಾನಕವಾಗಿವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಾಬರ್ಟ್ ವುಡ್ ವರದಿಗಾರರಿಗೆ ತಿಳಿಸಿದರು. ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪಾಕ್ ಪರಿಸ್ಥಿತಿ ಕುರಿತ ವರದಿ ಬಗ್ಗೆ ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು. ಆದ್ದರಿಂದಲೇ ಅಂತಾರಾಷ್ಟ್ರೀಯ ಸಮುದಾಯ ನಮ್ಮ ಜತೆಗೂಡಿ ತೀವ್ರವಾದಿಗಳ ಸೋಲಿಗೆ ಎಲ್ಲ ವಿಧಾನಗಳನ್ನು ಬಳಸುವುದು ಅವಶ್ಯಕವಾಗಿದೆ ಎಂದು ಅವರು ನುಡಿದರು.

ತಾಲಿಬಾನ್ ದುರ್ಬಲರಾಗುವುದಕ್ಕೆ ಬದಲಾಗಿ ಇನ್ನಷ್ಟು ವಿಸ್ತರಿಸುತ್ತಿದ್ದಾರೆಂಬ ಅಂದಾಜನ್ನು ವುಡ್ ಒಪ್ಪಲಿಲ್ಲ. ತಾಲಿಬಾನ್ ಗಂಭೀರ ಬೆದರಿಕೆಯೆನ್ನುವುದು ನಿಜ. ಅದರಲ್ಲಿ ಸಂದೇಹವೇ ಇಲ್ಲ ಎಂದು ವುಡ್ ಉತ್ತರಿಸಿದರು.

ಹಿಂಸಾತ್ಮಕ ತೀವ್ರವಾದಿಗಳ ನಿಗ್ರಹಕ್ಕೆ ನಾವು ಆಫ್ಘಾನಿಸ್ತಾನ ಅಥವಾ ಪಾಕಿಸ್ತಾನ ಸರ್ಕಾರದ ಜತೆ ಕೆಲಸ ಮಾಡುತ್ತಿದ್ದೇವೆ. ಅದೊಂದು ಸುಲಭದ ಕೆಲಸವಲ್ಲದಿದ್ದರೂ ನಾವು ಕಾರ್ಯತಂತ್ರ ಹೆಣೆದಿದ್ದೇವೆ ಎಂದು ವುಡ್ ಹೇಳಿದರು.

'ರಷ್ಯಾ ತಾಲಿಬಾನ್ ವಿರುದ್ಧ ಕಾರ್ಯಾಚರಣೆಯಲ್ಲಿ ಕೈಗೂಡಿಸುತ್ತದೆ. ತಾಲಿಬಾನ್ ಸೋಲಿಗೆ ರಷ್ಯಾ ಬದ್ಧವಾಗಿದೆ' ಎಂದು ವುಡ್ ತಿಳಿಸಿದರು. ತಾಲಿಬಾನ್ ಇಲ್ಲಿಯವರೆಗೆ ವಿಸ್ತರಿಸಲು ಹೇಗೆ ಸಾಧ್ಯವಾಯಿತೆಂದು ಪ್ರಶ್ನಿಸಿದಾಗ, ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಕಷ್ಟದ ಪರಿಸ್ಥಿತಿಗಳ ಅನುಕೂಲವನ್ನು ತಾಲಿಬಾನ್ ಪಡೆಯಿತು ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌ಟಿಟಿಇ-ಶ್ರೀಲಂಕಾ ನಮ್ಮ ಮಾತು ಕೇಳುತ್ತಿಲ್ಲ: ಅಮೆರಿಕ
ಪಿಎಂಎಲ್‌‌-ಎನ್‌ಗೆ ನೀಡಿದ ಬೆಂಬಲ ವಾಪಸ್: ಜರ್ದಾರಿ
ಎಲ್‌‌ಟಿಟಿಇ ವಶದಲ್ಲಿದ್ದ 63ಸಾವಿರ ನಾಗರಿಕರ ರಕ್ಷಣೆ
ನ್ಯೂಯಾರ್ಕ್ ಟೈಮ್ಸ್‌ಗೆ ಪ್ರಶಸ್ತಿ
ಕೀನ್ಯಾ ಕಲಹ: 24 ಬಲಿ
ಶರಣಾಗತಿಯ ಪ್ರಶ್ನೆಯೇ ಇಲ್ಲ: ಎಲ್‌ಟಿಟಿಇ ಘೋಷಣೆ