ಇತ್ತೀಚೆಗೆ ತಾಲಿಬಾನ್ ಸ್ವಾಧೀನಕ್ಕೆ ತೆಗೆದುಕೊಂಡಿರುವ, ಸ್ವಾತ್ ಕಣಿವೆಗೆ ಹೊಂದಿಕೊಂಡಿರುವ ಬುನೇರ್ ಜಿಲ್ಲೆಯ ಮೇಲಿನ ಹಿಡಿತವನ್ನು ಬಿಗಿಗೊಳಿಸಲು ತಾಲಿಬಾನ್ ಬಂಕರ್‌ಗಳನ್ನು ಮತ್ತು ಕಂದಕಗಳನ್ನು ತೋಡಿದೆ.
ಇಸ್ಲಾಮಾಬಾದ್‌ಗೆ 110 ಕಿಮೀ ದೂರದ ಬುನೇರ್‌ಗೆ ವಾಯವ್ಯ ಕಣಿವೆಯಿಂದ ನೂರಾರು ಸಶಸ್ತ್ರ ತಾಲಿಬಾನಿಗಳು ಪ್ರವೇಶಿಸಿದ್ದಾರೆ. ಅವರು ಚೆಕ್‌ಪಾಯಿಂಟ್‌ಗಳನ್ನು ಸ್ಥಾಪಿಸಿದ್ದು, ಮಸೀದಿಗಳನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ಸರ್ಕಾರೇತರ ಸಂಘಟನೆಗಳ ಕಚೇರಿಗಳ ಮೇಲೆ ದಾಂಧಲೆ ನಡೆಸಿದ್ದಾರೆಂದು ಸ್ಥಳೀಯ ಅಧಿಕಾರಿ ಹೇಳಿದ್ದಾರೆ.
ಸುಧಾರಿತ ಶಸ್ತ್ರಾಸ್ತ್ರಗಳೊಂದಿಗೆ ಉಗ್ರಗಾಮಿಗಳು ಸ್ವಾಬಿ, ಮಲಾಕಂಡ್ ಮತ್ತು ಮರ್ಡಾನ್ ಕಡೆ ಧಾವಿಸುತ್ತಿದ್ದಾರೆ. ಬುನೇರ್‌ನ್ನು ಎಪ್ರಿಲ್ 4ರಂದು ಆಕ್ರಮಣ ಮಾಡಿರುವ ಉಗ್ರರು, ಕಳೆದ ಐದು ದಿನಗಳಿಂದ ಲೂಟಿಯ ಪ್ರಕ್ರಿಯೆಯಲ್ಲಿದ್ದಾರೆ.
ಸರ್ಕಾರಿ ಮತ್ತು ಎನ್‌ಜಿಒ ಕಚೇರಿಗಳ ವಾಹನಗಳು, ಕಂಪ್ಯೂಟರ್‌ಗಳು, ಜನರೇಟರ್‌ಗಳು, ಆಹಾರವನ್ನು ಅವರು ಲೂಟಿ ಮಾಡುತ್ತಿದ್ದಾರೆಂದು ಡಾನ್ ವರದಿ ಮಾಡಿದೆ. ಸ್ವಾತ್‌ನಿಂದ ಆಗಮಿಸಿರುವ ತಾಲಿಬಾನಿಗಳು ಗಸ್ತು ಹೆಚ್ಚಿಸಿದ್ದು, ಸಾರ್ವಜನಿಕ ಸಾರಿಗೆಗಳಲ್ಲಿ ಸಂಗೀತ ನಿಷೇಧಿಸಿದ್ದಾರೆ ಮತ್ತು ಎನ್‌ಜಿಒ ಕಚೇರಿಗಳಲ್ಲಿ ಧಾಂಧಲೆ ಮಾಡಿ ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಮ್ಮ ಕಡೆಯವರು ಪಟ್ಟಣದಲ್ಲಿ ಎಫ್‌ಎಂ ರೇಡಿಯೊ ನಿಲ್ದಾಣ ಮತ್ತು ಷರಿಯತ್ ಕೋರ್ಟ್‍ಗಳನ್ನು ಸ್ಥಾಪಿಸುವುದು. ನಮ್ಮ ಕಾಜಿಗಳು ಬುನೇರ್‌ನಲ್ಲಿ ಕೋರ್ಟ್‌ಗಳನ್ನು ನಡೆಸಲಿದ್ದಾರೆಂದು ತಾಲಿಬಾನ್ ಕಮಾಂಡರ್ ಮೊಹಮದ್ ಖಲೀಲ್ ತಿಳಿಸಿದ್ದಾನೆ. |