ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ರೀಲಂಕಾ: ವೇಲುಪಿಳ್ಳೈ ಪ್ರಭಾಕರನ್ ಪತ್ತೆ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ: ವೇಲುಪಿಳ್ಳೈ ಪ್ರಭಾಕರನ್ ಪತ್ತೆ ?
ಪ್ರತ್ಯೇಕ ತಾಯ್ನಾಡಿಗಾಗಿ ಶಸ್ತ್ರಸಜ್ಜಿತ ಹೋರಾಟ ನಡೆಸಿದ ಎಲ್‌ಟಿಟಿಇ ಸೋಲಿನ ಅಂಚಿನಲ್ಲಿದ್ದು, ಅದರ ಮುಖ್ಯಸ್ಥ ವಿ. ಪ್ರಭಾಕರನ್‌ನನ್ನು ಮುಲ್ಲೈತಿವು ಪಟ್ಟಣದ ಸಣ್ಣ ಪ್ರದೇಶದಲ್ಲಿ ಬಲೆಗೆ ಕೆಡವಿರುವುದಾಗಿ ಶ್ರೀಲಂಕಾ ಸರ್ಕಾರ ತಿಳಿಸಿದೆ.

ಎಲ್‌ಟಿಟಿಇ ಮುಖ್ಯಸ್ಥ ಕೆಲವು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದ್ದು, ತನಗೆ ಮುಕ್ತವಾಗಿ ಹೋಗಲು ಸ್ವಾತಂತ್ರ್ಯ ನೀಡಿದರೆ ಒತ್ತೆಯಾಳುಗಳ ಜೀವವುಳಿಸುವುದಾಗಿ ಒತ್ತಡ ಹೇರಿದ್ದಾನೆಂದು ತಿಳಿದುಬಂದಿದೆ.

ರಕ್ಷಣಾ ವಕ್ತಾರ ಲಕ್ಷ್ಮಣ್ ಹುಲ್‌ಗಲೆ ಈ ವಿಷಯವನ್ನು ದೃಢಪಡಿಸಿದ್ದು, ಬಂಡುಕೋರ ಎಲ್‌ಟಿಟಿಇ ಕಾರ್ಯಕರ್ತರ ವಿರುದ್ಧ ಕಾರ್ಯಾಚರಣೆ ಬಹುತೇಕ ಮುಕ್ತಾಯವಾಗಿದ್ದು, ನಮ್ಮ ಪಡೆಗಳು ಪ್ರಭಾಕರನ್ ಅಡಗುತಾಣವನ್ನು ಸಮೀಪಿಸಿರುವುದಾಗಿ ಹೇಳಿದ್ದಾರೆ.

ಸುಮಾರು 10,000 ಗ್ರಾಮಸ್ಥರು ಕದನವಲಯದಲ್ಲಿ ಸಿಕ್ಕಿಬಿದ್ದಿದ್ದು, ಬಂಡುಕೋರರು ಬಂದೂಕಿನ ಮೊನೆಯಿಂದ ಅವರನ್ನು ಹಿಡಿದಿಟ್ಟಿದ್ದಾರೆ. ಶರಣಾಗುವಂತೆ ಕರೆ ನೀಡಿದ್ದರೂ ತಮಿಳು ವ್ಯಾಘ್ರಗಳು ತೀವ್ರ ಪ್ರತಿರೋಧ ಒಡ್ಡಿದ್ದಾರೆಂದು ತಿಳಿದುಬಂದಿದೆ.

ಗೆರಿಲ್ಲಾಗಳು 10-12 ಚದರ ಕಿಲೋಮೀಟರ್ ಪ್ರದೇಶವನ್ನು ಕೈವಶಮಾಡಿಕೊಂಡಿದ್ದು, ಸಾವಿರಾರು ನಾಗರಿಕರು ಇನ್ನೂ ಸಿಕ್ಕಿಬಿದ್ದಿದ್ದಾರೆ. ಬಂಡುಕೋರರು ಫಿರಂಗಿ ಮತ್ತು ಟ್ಯಾಂಕ್‌ಗಳನ್ನು ಬಳಸುತ್ತಿದ್ದಾರೆಂದು ದ್ವೀಪದ ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಉದಯ ನಾನಯಕ್ಕರಾ ತಿಳಿಸಿದರು. ಬಂಡುಕೋರರು ನಾಗರಿಕರನ್ನು ಗುರಾಣಿಗಳಂತೆ ಬಳಸುತ್ತಿದ್ದಾರೆಂದು ಆರೋಪಿಸಲಾಗಿದೆ.

ಸುಮಾರು ಒಂದು ಲಕ್ಷ ಜನರು ಬಂಡುಕೋರ ಹಿಡಿತದ ಪ್ರದೇಶದಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಕದನವಲಯದಲ್ಲಿ ಇನ್ನೂ ಎಷ್ಟು ಜನ ಸಿಕ್ಕಿಬಿದ್ದಿದ್ದಾರೆಂದು ಅಸ್ಪಷ್ಟವಾಗಿದೆ. ಬಂಡುಕೋರರಿಗೆ ಶರಣಾಗುವಂತೆ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ಆದೇಶಿಸಿದ್ದು, ಪ್ರತ್ಯೇಕ ತಮಿಳು ತಾಯ್ನಾಡಿಗಾಗಿ ಸುದೀರ್ಘ, ನಿರ್ದಯ ಕದನದ ಸಾರಥ್ಯ ವಹಿಸಿದ ಪ್ರಭಾಕರನ್ ಅವರಿಗೆ ಕ್ಷಮಾದಾನ ನೀಡುವುದನ್ನು ತಳ್ಳಿಹಾಕಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಲಿಬಾನ್ ವಶದಲ್ಲಿ ಬುನೇರ್ ಜಿಲ್ಲೆ
ಎಲ್‌ಟಿಟಿಇ ಶರಣಾಗತಿಗೆ ಯುಎನ್‌ಎಸ್‌ಸಿ ತಾಕೀತು
ದ.ಆಫ್ರಿಕಾದಲ್ಲಿ ಚುನಾವಣೆ
ಆತ್ಮಾಹುತಿ ಪಡೆ ಪತ್ತೆ
ಇರಾನ್ ಜತೆ ನೇರ ರಾಯಭಾರ: ಒಬಾಮಾ
ಕೊರಿಯದ ಹಂತಕನಿಗೆ ಮರಣದಂಡನೆ ಶಿಕ್ಷೆ