ದಕ್ಷಿಣ ಆಫ್ರಿಕಾದ ಆಡಳಿತಾರೂಢ ಎಎನ್‌ಸಿ ಗುರುವಾರ ವಿಜಯದ ಹೊಸ್ತಿಲಿನಲ್ಲಿದ್ದು, ಆರ್ಥಿಕ ಹಿಂಜರಿತದ ಅಂಚಿನಲ್ಲಿರುವ ರಾಷ್ಟ್ರದ ದೊಡ್ಡ ಆರ್ಥಿಕತೆಯು ಎನ್‌ಎನ್‌ಸಿ ಪಕ್ಷದ ನಾಯಕ ಜಾಕೋಬ್ ಝೂಮಾ ಅವರ ನಿಯಂತ್ರಣಕ್ಕೆ ಬರಲಿದೆ. ಆರಂಭದ ಫಲಿತಾಂಶದಲ್ಲಿ ಎಎನ್‌ಸಿ ಶೇ.60ರಷ್ಟು ಬೆಂಬಲ ಪಡೆದಿರುವುದನ್ನು ತೋರಿಸಿದೆ.
ಝೂಮಾ ಬಡವರ ಚಾಂಪಿಯನ್ ಎಂದು ತಮ್ಮನ್ನು ಸ್ವತಃ ಬಿಂಬಿಸಿಕೊಂಡಿದ್ದರು. ಆದರೆ ಅನೇಕ ಮತದಾರರಿಗೆ ಎಎನ್‌ಸಿಯು ವ್ಯಾಪಕ ಅಪರಾಧ, ಬಡತನ ಮತ್ತು ಏಡ್ಸ್ ನಿರ್ಮೂಲನೆಗೆ ವಿಫಲವಾಗಿದ್ದರಿಂದ ಉಂಟಾದ ಹತಾಶೆಗಳಿಗಿಂತ ಎಎನ್‌ಸಿಯ ಜನಾಂಗಭೇದ ವಿರೋಧಿ ಧೋರಣೆಯು ಪ್ರಾಧಾನ್ಯತೆ ಪಡೆದಿದೆ.
ತಾವು ಎಎನ್‌ಸಿಗೆ ನಿಷ್ಠೆಯಿಂದಾಗಿ ಮತ ಹಾಕಿದ್ದೇಕೆಂದರೆ ತಮ್ಮ ತಂದೆಯು ಜನಾಂಗಭೇದ ಹೋರಾಟದಲ್ಲಿ ಸಕ್ರಿಯವಾಗಿದ್ದಾಗಿ ಮಾರ್ಗರೇಟ್ ಸೊವೆಟೊನಲ್ಲಿ ತಿಳಿಸಿದ್ದಾರೆ. ಜೋಹಾನ್ಸ್‌ಬರ್ಗ್ ಉಪನಗರವಾದ ಸೊವೆಟೊ ಜನಾಂಗಭೇದ ವಿರೋಧಿ ಹೋರಾಟದ ಸಂಕೇತವಾಗಿದೆ.
ಎಎನ್‌ಸಿ ಭಿನ್ನಮತೀಯರು ರಚಿಸಿದ ಕೋಪ್ ಪಕ್ಷವು ಶೇ.7.6 ಮತಗಳನ್ನು ಗಳಿಸಲು ಯಶಸ್ವಿಯಾಗಿದೆ.ಶುಕ್ರವಾರದೊಳಗೆ ಅಂತಿಮ ಫಲಿತಾಂಶ ನಿರೀಕ್ಷಿಸುವಂತಿಲ್ಲ. ಆದರೆ 67 ವರ್ಷ ಪ್ರಾಯದ ಝೂಮಾ ಅಧ್ಯಕ್ಷರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಝೂಮಾ ತಮಗೆ ಅಪಖ್ಯಾತಿ ಉಂಟುಮಾಡಿದ 8 ವರ್ಷಗಳ ಕಾಲದಿಂದಿದ್ದ ಭ್ರಷ್ಟಾಚಾರ ಪ್ರಕರಣವನ್ನು ಪ್ರಾಸಿಕ್ಯೂಟರ್‌ಗಳು ಕೈಬಿಡುವುದರಲ್ಲಿ ಯಶಸ್ವಿಯಾಗಿದ್ದಾರೆ. |