ಆಗ್ನೇಯ ಬಾಗ್ದಾದ್ನಲ್ಲಿ ಪೊಲೀಸ್ ಗಸ್ತುಪಡೆಯ ಮೇಲೆ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 28 ಜನರು ಹತರಾಗಿದ್ದು 52 ಜನರು ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.
ನಿರಾಶ್ರಿತರ ಕುಟುಂಬಗಳಿಗೆ ಇರಾಕಿ ಪೊಲೀಸರು ಆಹಾರ, ಸಾಮಗ್ರಿಗಳ ನೆರವು ನೀಡುತ್ತಿದ್ದಾಗ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡ ಎಂದು ಒಳಾಡಳಿತ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಸತ್ತವರಲ್ಲಿ ಕನಿಷ್ಠ 10 ಪೊಲೀಸರು ಮತ್ತು ಐವರು ಮಕ್ಕಳು ಸೇರಿದ್ದಾರೆಂದು ಅಧಿಕಾರಿ ನುಡಿದರು.
28 ಮಂದಿ ದುರ್ಘಟನೆಯಲ್ಲಿ ಅಸುನೀಗಿರುವ ಸಂಗತಿಯನ್ನು ರಕ್ಷಣಾ ಸಚಿವಾಲಯದ ಅಧಿಕಾರಿ ದೃಢಪಡಿಸಿದರು. ಕಳೆದ ಎರಡು ವರ್ಷಗಳಿಂದ ಇರಾಕ್ನಲ್ಲಿ ಭದ್ರತೆಯನ್ನು ಗಮನಾರ್ಹವಾಗಿ ಸುಧಾರಿಸಲಾಗಿದ್ದು, ಭದ್ರತಾ ಪಡೆಗಳ ಮೇಲೆ ರಾಷ್ಟ್ರದ ಕೆಲವು ಭಾಗಗಳಲ್ಲಿ ದಾಳಿ ನಡೆಸುವುದು ಈಗಲೂ ಮಾಮೂಲಿಯಾಗಿದೆ. ಇರಾಕ್ನಿಂದ ಸೇನೆಯನ್ನು ಹಂತ, ಹಂತವಾಗಿ ವಾಪಸು ಪಡೆಯುವುದಾಗಿ ಅಮೆರಿಕದ ಅಧ್ಯಕ್ಷ ಒಬಾಮಾ ಘೋಷಿಸಿದ ಬೆನ್ನಲ್ಲೇ ಇರಾಕ್ ಹಿಂಸೆಯ ದಳ್ಳುರಿಯಿಂದ ಬೇಯುತ್ತಿದೆ. |