ಯುದ್ಧದಿಂದ ಜರ್ಜರಿತವಾದ ಉತ್ತರದ ಸಣ್ಣ ಭೂಭಾಗದಲ್ಲಿ ಸಿಕ್ಕಿಬಿದ್ದಿರುವ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜಲಾಂತರ್ಗಾಮಿ ಬಳಸಿಕೊಂಡು ದ್ವೀಪದಿಂದ ಪಲಾಯನ ಮಾಡಬಹುದು ಎಂದು ಶ್ರೀಲಂಕಾ ಸೇನಾಧಿಕಾರಿ ಶುಕ್ರವಾರ ಶಂಕಿಸಿದ್ದಾರೆ.
ತನ್ನ ಪುತ್ರ ಚಾರ್ಲ್ಸ್ ಆಂತೋನಿ, ವ್ಯಾಘ್ರಗಳ ಬೇಹುಗಾರಿಕೆ ಮುಖ್ಯಶ್ಥ ಪೋಟ್ಟು ಅಮ್ಮಾನ್ ಮತ್ತು ಸೀ ಟೈಗರ್ ಮುಖ್ಯಸ್ಥ ಸೂಸೈ ಜತೆ ಗುಂಡು ಹಾರಾಟ ನಿಷೇಧ ವಲಯದಲ್ಲಿರುವ ಪ್ರಭಾಕರನ್ ದ್ವೀಪದಿಂದ ತಪ್ಪಿಸಿಕೊಳ್ಳಲು ಜಲಾಂತರ್ಗಾಮಿಯೊಂದನ್ನು ಉಳಿಸಿಕೊಂಡಿರಬಹುದೆಂದು ಬ್ರಿಗೇಡಿಯರ್ ಶವೇಂದ್ರ ಡಿಸಿಲ್ವ ಶಂಕಿಸಿದ್ದಾರೆ.
ಈ ವಾರ ಸೇನೆಗೆ ಶರಣಾದ ಮಾಜಿ ವಕ್ತಾರ ದಯಾ ಮಾಸ್ಟರ್ ಈ ವಿಷಯ ಬಹಿರಂಗಪಡಿಸಿದ್ದಾನೆಂದು ಡಿಸಿಲ್ವ ತಿಳಿಸಿದರು. ಕಿಲ್ಲಿನೋಚ್ಚಿಗೆ ಭೇಟಿ ನೀಡಿದ ಆಯ್ದ ವರದಿಗಾರರ ತಂಡಕ್ಕೆ ಡಿಸಿಲ್ವ ಮೇಲಿನ ವಿಷಯ ತಿಳಿಸಿದ್ದಾನೆ.
ಎಲ್‌ಟಿಟಿಇ ರಾಜಕೀಯ ದಳದ ಮುಖ್ಯಸ್ಥ, ಹತರಾದ ತಮಿಳ್‌ಸೆಲ್ವನ್‌ನ ನಿಕಟವರ್ತಿಗಳಾದ ದಯಾ ಮಾಸ್ಟರ್ ಮತ್ತು ಜಾರ್ಜ್ ಪುತ್ತುಮಾಲನ್‌ನಲ್ಲಿ ಗುಂಡು ಹಾರಾಟ ನಿಷೇಧ ವಲಯದಲ್ಲಿ ಸೇನೆಗೆ ಶರಣಾಗಿದ್ದರು. ಉತ್ತರ ಮುಲ್ಲತಿವುನಲ್ಲಿ ಎಲ್‌ಟಿಟಿಇ ಕಾರ್ಯಕರ್ತರು ಸಮುದ್ರ ಮಾರ್ಗವಾಗಿ ತಪ್ಪಿಸಿಕೊಳ್ಳಲು ಅವಕಾಶವಿರುವ ಕಡೆಯ ಸಮೀಪದ ಪ್ರದೇಶದಲ್ಲೆಲ್ಲ ಮುಲ್ಲತಿವು ಸುತ್ತ ನೌಕಾ ಕಾವಲನ್ನು ಹಾಕಲಾಗಿದೆ |