ರಶ್ಯಾದ ಅಧ್ಯಕ್ಷ ದಿಮಿಟ್ರಿ ಮೆಡ್ವೆಡೇವ್ ಅವರು ದೇಶದ ಮಿಲಿಟರಿ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿರುವ ವೆಲೆಂಟಿನ್ ಕೊರಾಬೆಲ್ನಿಕೋವ್ ಅವರನ್ನು ವಜಾಗೊಳಿಸಿದ್ದಾರೆಂದು ಕ್ರೆಮ್ಲಿನ್ ಪತ್ರಿಕೆ ವರದಿ ಮಾಡಿದೆ. ಲೆಪ್ಟಿನೆಂಟ್ ಜನರಲ್ ಅಲೆಗ್ಸಾಂಡರ್ ಶ್ಲಾಕ್ಲುರೋವ್ ಅವರನ್ನು ತೆರವಾದ ಸ್ಥಾನಕ್ಕೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. |