ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 12 ಮಕ್ಕಳನ್ನು ಬಲಿ ತೆಗೆದುಕೊಂಡ 'ಬಾಂಬ್ ಆಟ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
12 ಮಕ್ಕಳನ್ನು ಬಲಿ ತೆಗೆದುಕೊಂಡ 'ಬಾಂಬ್ ಆಟ'
ಪಾಕಿಸ್ತಾನದ ದಿರ್ ಜಿಲ್ಲೆಯಲ್ಲಿ ಬಾಂಬೊಂದನ್ನು ಆಟದ ವಸ್ತುವೆಂದು ಭಾವಿಸಿದ ಮಕ್ಕಳು ಬಾಂಬ್‍‌‌ನೊಂದಿಗೆ ಆಟವಾಡುತ್ತಿದ್ದಾಗ ಅದು ಸ್ಫೋಟಿಸಿ 12 ಮಂದಿ ಮಕ್ಕಳು ಅಸುನೀಗಿದ ಭೀಕರ ಘಟನೆ ಸಂಭವಿಸಿದೆ. ಸಾವನ್ನಪ್ಪಿರುವ 7 ಮಂದಿ ಮಕ್ಕಳು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಲ್ಲಿ ಐವರು ಬಾಲಕಿಯರು ಎಂದು ಜಮಾನ್ ಎಂಬ ಪೊಲೀಸ್ ಅಧಿಕಾರಿ ಕೆಳ ದಿರ್ ಜಿಲ್ಲೆಯಿಂದ ರಾಯ್ಟರ್ಸ್‌ಗೆ ತಿಳಿಸಿದ್ದಾರೆ.

ಫುಟ್‌ಬಾಲ್‌ನಂತೆ ಬಾಂಬ್ ಹೋಲುತ್ತಿತ್ತೆಂದು ಜಮಾನ್ ತಿಳಿಸಿದ್ದು, ಮನೆಗಳಿಗೆ ಹಿಂತಿರುಗುವಾಗ ಮಕ್ಕಳು ತಮ್ಮ ಶಾಲೆಯ ಬಳಿ ಬಾಂಬನ್ನು ಕಂಡು ಆಟವಾಡಲು ಎತ್ತಿಕೊಂಡರೆಂದು ಜಮಾನ್ ತಿಳಿಸಿದ್ದಾರೆ. ಮಕ್ಕಳು ಬಾಂಬ್ ಜತೆ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಿಸಿತೆಂದು ತಿಳಿದುಬಂದಿದೆ. ಇದೊಂದು ಉದ್ದೇಶಪೂರ್ವಕ ಭಯೋತ್ಪಾದಕ ಕೃತ್ಯವೇ ಅಥವಾ ಆಕಸ್ಮಿಕವೇ ಎನ್ನುವುದು ಸ್ಪಷ್ಟವಾಗಿಲ್ಲ.

ನೆರೆಯ ಅಫ್ಘಾನಿಸ್ತಾನದಲ್ಲಿ ಸೋವಿಯಟ್ ಪಡೆಗಳ ವಿರುದ್ಧ 1980ರ ದಶಕದ ಹೋರಾಟದಲ್ಲಿ ಮುಜಾಹಿದ್ದೀನ್ ಹೋರಾಟಗಾರರು ಬಿಟ್ಟುಹೋದ ಸ್ಫೋಟಿಸದಿರುವ ಬಾಂಬ್‌ಗಳು ಆ ಪ್ರದೇಶದಲ್ಲಿ ಹರಡಿವೆ. ದಿರ್ ವಾಯವ್ಯ ಗಡಿ ಪ್ರಾಂತ್ಯದ ಮಲಕಾಂಡ್ ವಿಭಾಗದ ಭಾಗವಾಗಿದ್ದು, ಅಲ್ಲಿ ಅಧ್ಯಕ್ಷ ಜರ್ದಾರಿ ಇಸ್ಲಾಮಿಕ್ ಷರಿಯತ್ ಕಾನೂನಿನ ಜಾರಿಗೆ ಅನುಮತಿ ನೀಡಿದ್ದಾರೆ.

ಆದರೆ ಜರ್ದಾರಿ ಷರಿಯತ್ ಕಾನೂನು ಜಾರಿ ಮಾಡಿದ ಕೆಲವೇ ದಿನಗಳಲ್ಲಿ, ಉಗ್ರಗಾಮಿಗಳು ಸ್ವಾತ್ ಕಣಿವೆಯ ಭದ್ರಕೋಟೆಯಿಂದ ಮಲಕಾಂಡ್ ಇತರೆ ಭಾಗಗಳಿಗೂ ತಮ್ಮ ಜಾಲ ವಿಸ್ತರಿಸಿದ್ದು, ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳಲ್ಲಿ ಪರಮಾಣು ಶಸ್ತ್ರ ರಾಷ್ಟ್ರವು ಗೊಂದಲಗಳಿಗೆ ಜಾರಿರುವ ಬಗ್ಗೆ ಕಳವಳ ಮೂಡಿಸಿದೆ. ಇಸ್ಲಾಮಿಕ್ ಉಗ್ರಗಾಮಿಗಳ ಜತೆ ಪಾಕಿಸ್ತಾನದ ಒಪ್ಪಂದದ ನೀತಿಯನ್ನು ಪಾಶ್ಚಿಮಾತ್ಯ ಸರ್ಕಾರಗಳು ಟೀಕಿಸಿದ್ದು, ಇದು ಉಗ್ರವಾದವನ್ನು ಪೋಷಿಸುತ್ತದೆಂದು ಹೇಳಿದ್ದಾರೆ. ಹಿಂಸಾಚಾರ ಹತ್ತಿಕ್ಕಲು ರಾಜಕೀಯ ದಾರಿಗಳನ್ನು ಬಳಸಲು ಪ್ರಯತ್ನಿಸುವುದಾಗಿ ಪಾಕಿಸ್ತಾನ ಅಧಿಕಾರಿಗಳು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೂದಲೆಳೆಯ ಅಂತರದಲ್ಲಿ 'ಪ್ರಭಾಕರನ್' ಪಾರು
ಲಾಹೋರ್ ದಾಳಿ-ಪೊಲೀಸ್ ನಿರ್ಲಕ್ಷ್ಯವೇ ಕಾರಣ
ಉ.ಕೊರಿಯದ ಪರಮಾಣು ಇಂಧನ ಮರುಸಂಸ್ಕರಣೆ ಆರಂಭ
ಉಗ್ರ ನಿಗ್ರಹಕ್ಕೆ ಪೋಲೆಂಡ್ ನೆರವು ಅಗತ್ಯ: ಭಾರತ
ಲಷ್ಕರೆಯಿಂದ ಮತ್ತಷ್ಟು ದಾಳಿ: ಪೆಟ್ರಾಸ್ ಶಂಕೆ
ಬುನೇರ್‌‌ಗೆ ತಾಲಿಬಾನ್ ಮರುಪ್ರವೇಶ: ಸೇನೆ ಸಿದ್ಧತೆ