ಸ್ವಾತ್ ಕಣಿವೆ ಮತ್ತು ಬುನೇರ್ ಪ್ರದೇಶಗಳು ತಾಲಿಬಾನೀಕರಣವಾಗಿದ್ದನ್ನು ತಪ್ಪಿಸಲು ಉಪನ್ಯಾಸಗಳನ್ನು ನೀಡುವ ಬದಲಿಗೆ ಪಾಕಿಸ್ತಾನಕ್ಕೆ ಸಹಾಯ ನೀಡುವಂತೆ ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾಗಿರುವ ಹುಸೇನ್ ಹಕ್ಕಾನಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ಮಾನವ ಜೀವಗಳ ನಷ್ಟವನ್ನು ತಪ್ಪಿಸುವುದು ಮತ್ತು ಶಾಂತಿ ಸ್ಥಾಪಿಸುವುದು ಸ್ವಾತ್ ಒಪ್ಪಂದದ ಗುರಿಯಾಗಿದ್ದು, ನಾವು ಉಗ್ರಗಾಮಿಗಳಿಗೆ ಶರಣಾಗಿದ್ದೇವೆಂದು ಅರ್ಥವಲ್ಲ ಎಂದು ಹೇಳಿದ್ದಾರೆ. |