ವಲಯಾರ್‌ಮಡಾಂನಲ್ಲಿ ಕನಿಷ್ಠ 52 ಎಲ್‌ಟಿಟಿಇ ಉಗ್ರಗಾಮಿಗಳು ಶ್ರೀಲಂಕಾ ಸೇನೆಗೆ ಶರಣಾಗಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ.
ಶರಣಾದವರಲ್ಲಿ 23 ಮಂದಿ 13ರಿಂದ 18ರ ವಯೋಮಿತಿ ಉಳ್ಳವರಾಗಿದ್ದು, ಉಳಿದ 29 ಶಾಲಾಮಕ್ಕಳನ್ನು ಕೂಡ ಸಂಘಟನೆಗೆ ಇತ್ತೀಚೆಗೆ ಸೇರಿಸಿಕೊಳ್ಳಲಾಗಿತ್ತೆಂದು ಮೂಲಗಳು ಹೇಳಿವೆ.
ಸೋಮವಾರ ಸಂಜೆ ವಲಯಾರ್‌ಮಡಂ ಪ್ರದೇಶದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಹದಿಹರೆಯದ ಎಲ್‌ಟಿಟಿಇ ಕಾರ್ಯಕರ್ತರನ್ನು ಸೈನಿಕರು ಪತ್ತೆಹಚ್ಚಿದರು. ಬಾಲಕರ ತಲೆಯನ್ನು ಬೋಳಿಸಲಾಗಿತ್ತು ಮತ್ತು ಬಾಲಕಿಯರಿಗೆ ಮೊಟಕಾದ ಕೂದಲಿನ ಹೇರ್‌ಕಟ್ ಮಾಡಲಾಗಿತ್ತೆಂದು ಮೂಲಗಳು ಹೇಳಿವೆ.
ಬಾಲಕರು ತಪ್ಪಿಸಿಕೊಳ್ಳುವ ಧೈರ್ಯ ತೋರಿದಾಗ ಅವರನ್ನು ಗುರುತು ಹಿಡಿಯುವುದಕ್ಕಾಗಿ ಎಲ್ಟಿಟಿಇ ಹಾಗೆ ಮಾಡಿದೆಯೆಂದು ಶರಣಾಗತಿಯಾದವರು ತಿಳಿಸಿದ್ದಾರೆ. |