ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕವನ್ನು ನಡುಗಿಸಿದ ಅಲ್ ಖಾಯಿದಾ ನಾಯಕ ಒಸಾಮಾ ಬಿನ್ ಲಾಡೆನ್ ಬದುಕಿದ್ದಾನೆಯೇ ಅಥವಾ ಸತ್ತಿದ್ದಾನೆಯೇ? ಲಾಡೆನ್ ಸತ್ತಿದ್ದಾನೆಂದು ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಹೇಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಪಾಕಿಸ್ತಾನದ ಬೇಹುಗಾರಿಕೆ ಮೂಲಗಳು ಒಸಾಮಾ ಸತ್ತಿದ್ದಾನೆಂದೇ ನಂಬಿಕೆಯಿರಿಸಿದೆ. ಆದರೆ ಅದನ್ನು ಸಾಬೀತು ಮಾಡಲು ಯಾವುದೇ ಸಾಕ್ಷ್ಯಾಧಾರವಿಲ್ಲವೆಂದು ನುಡಿದಿದೆ.ಒಸಾಮಾ ಸತ್ತಿರುವ ಬಗ್ಗೆ ಅಮೆರಿಕನ್ನರಿಗೆ ಗೊತ್ತಿಲ್ಲ. ಅವನನ್ನು ಪತ್ತೆ ಹಚ್ಚಲು ಅಮೆರಿಕದ ಪೂರ್ಣವಾಗಿ ಸಜ್ಜುಗೊಂಡಿದೆ. ಆದರೆ ನಮ್ಮ ಬೇಹುಗಾರಿಕೆ ಸೇವೆ ಒಸಾಮಾ ಅಸ್ತಿತ್ವದಲೇ ಇಲ್ಲ. ಅವನು ಸತ್ತಿದ್ದಾನೆಂದು ಭಾವಿಸಿರುವುದಾಗಿ ಜರ್ದಾರಿ ವರದಿಗಾರರಿಗೆ ತಿಳಿಸಿದರು. ಆದರೆ ಒಸಾಮಾ ಸತ್ತಿದ್ದಾನೆನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ. ನಾವು ವಾಸ್ತವಾಂಶ ಮತ್ತು ಕಾಲ್ಪನಿಕತೆಯ ನಡುವೆ ಇರುವುದಾಗಿ ಅವರು ಹೇಳಿದರು. |