ಶ್ರೀಲಂಕಾದ ಯುದ್ಧಪೀಡಿತ ಪ್ರದೇಶದಲ್ಲಿ ಸಂತ್ರಸ್ತ ಜನರಿಗಾಗಿ ಭಾರತ 100 ಕೋಟಿ ರೂಪಾಯಿಗಳ ಮಾನವೀಯ ನೆರವನ್ನು ಘೋಷಿಸಿದೆ. ಯುದ್ಧಪೀಡಿತ ಪ್ರದೇಶದಿಂದ ತೆರವುಗೊಂಡಿರುವ ಸಾವಿರಾರು ತಮಿಳು ನಾಗರಿಕರ ನೆರವಿಗಾಗಿ 100 ಕೋಟಿ ರೂ.ಗಳ ನೆರವನ್ನು ಮಂಜೂರು ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ. |