ಸರ್ಕಾರಿ ಪಡೆಗಳು ಮತ್ತು ಎಲ್‌ಟಿಟಿಇ ಸಮರದ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಸುವಂತೆ ಮಾನವ ಹಕ್ಕು ಕಾವಲು ಸಮಿತಿ ತಿಳಿಸಿದೆ.
ಎಲ್‌ಟಿಟಿಇ ವಿರುದ್ಧ ಕದನದಲ್ಲಿ ಕಿಕ್ಕಿರಿದು ತುಂಬಿದ ನಾಗರಿಕ ಪ್ರದೇಶದಲ್ಲಿ ಭಾರೀ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾಗಿ ಸರ್ಕಾರ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಈ ತನಿಖೆ ನಡೆಸಬೇಕೆಂದು ಅದು ಒತ್ತಾಯಿಸಿದೆ.
ಇತ್ತೀಚಿನ ಹೋರಾಟದಲ್ಲಿ ಅಧಿಕ ಶಕ್ತಿಯ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾಗಿ ಶ್ರೀಲಂಕಾದ ಅಧ್ಯಕ್ಷೀಯ ಕಾರ್ಯಾಲಯ ಒಪ್ಪಿಕೊಂಡಿದೆ. " ನಮ್ಮ ಭದ್ರತಾಪಡೆಗಳಿಗೆ ನಾಗರಿಕ ಸಾವುನೋವನ್ನು ಉಂಟುಮಾಡುವಂತ ಭಾರೀ ಸಾಮರ್ಥ್ಯದ ಬಂದೂಕುಗಳು,ಯುದ್ಧವಿಮಾನ ಮತ್ತು ವೈಮಾನಿಕ ಶಸ್ತ್ರಾಸ್ತ್ರ ಬಳಕೆ ಸ್ಥಗಿತಗೊಳಿಸುವಂತೆ ಆದೇಶ ನೀಡಲಾಗಿದೆಯೆಂದು' ಅದರ ಹೇಳಿಕೆ ಉಲ್ಲೇಖಿಸಿದ ವರದಿಗಳು ತಿಳಿಸಿವೆ.
ಮಾನವ ಹಕ್ಕು ಕಾವಲು ಸಮಿತಿ ಈ ವಿಷಯದ ಬಗ್ಗೆ ಸೋಮವಾರ ಪತ್ರಿಕಾಪ್ರಕಟಣೆ ನೀಡಿದೆ.ಅಂತಿಮವಾಗಿ ತಾನು ಭಾರೀ ಶಸ್ತ್ರಾಸ್ತ್ರಗಳನ್ನು ಯುದ್ಧದಲ್ಲಿ ಬಳಸಿದ್ದಾಗಿ ಒಪ್ಪಿಕೊಳ್ಳುವ ಮೂಲಕ ಅದರ ಅಧಿಕೃತ ವಂಚನೆ ಮತ್ತು ಅಮಾನುಷ ಮಿಲಿಟರಿ ತಂತ್ರಗಳು ಬೆಳಕಿಗೆ ಬಂದಿವೆ ಎಂದು ಅಡಾಮ್ಸ್ ಹೇಳಿದ್ದಾರೆ.
ವಿಶ್ವಸಂಸ್ಥೆ ಭದ್ರತಾಮಂಡಳಿ ತನ್ನ ತಲೆಯನ್ನು ಮರಳಿನಲ್ಲಿ ಹುದುಗಿಸಿಕೊಳ್ಳುವ ಬದಲಿಗೆ ತುರ್ತಾಗಿ ಅಂತಾರಾಷ್ಟ್ರೀಯ ತನಿಖಾ ಸಮಿಯನ್ನು ರಚಿಸಿ ಎರಡು ಕಡೆ ಮಾನವ ಹಕ್ಕು ದುರ್ಬಳಕೆ ಕುರಿತು ತನಿಖೆ ನಡೆಸಬೇಕು ಎಂದು ಅಡಾಮ್ಸ್ ಹೇಳಿದ್ದಾರೆ. |