ಐರೋಪ್ಯ ರಾಜತಾಂತ್ರಿಕರ ಜತೆ ಶ್ರೀಲಂಕಾಗೆ ಪ್ರವಾಸ ಹೊರಟಿದ್ದ ಸ್ವೀಡನ್ ವಿದೇಶಾಂಗ ಸಚಿವ ಕಾರ್ಲ್ ಬಿಲ್ಟ್ ಅವರಿಗೆ ಶ್ರೀಲಂಕಾ ಪ್ರವೇಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸ್ವೀಡನ್ ಶ್ರೀಲಂಕಾದಲ್ಲಿರುವ ರಾಜತಾಂತ್ರಿಕರನ್ನು ಸಮಾಲೋಚನೆಗೆ ಕರೆದಿದೆ.
ಬುಧವಾರದ ರಾಜತಾಂತ್ರಿಕ ಯಾತ್ರೆಯು ಬಂಡುಕೋರರ ಜತೆ ಹೋರಾಡುತ್ತಿರುವ ಸೇನೆಗೆ ಸಂಪೂರ್ಣ ಕದನವಿರಾಮ ಘೋಷಿಸುವಂತೆ ಶ್ರೀಲಂಕಾ ಮೇಲೆ ಒತ್ತಡ ಹಾಕುವ ಸಲುವಾಗಿ ಅಂತಾರಾಷ್ಟ್ರೀಯ ಪ್ರಯತ್ನವಾಗಿದೆ.
ಬಿಲ್ಟ್ ಅವರನ್ನು ತೇಜೋವಧೆ ಮಾಡುವ ಉದ್ದೇಶವಿಲ್ಲವೆಂದು ಹೇಳಿರುವ ಶ್ರೀಲಂಕಾದ ವಿದೇಶಾಂಗ ಸಚಿವಾಲಯದ ಅಧಿಕಾರಿ, ಒಂದೇ ಬಾರಿಗೆ ಅನೇಕ ಉನ್ನತ ಮಟ್ಟದ ಪ್ರತಿನಿಧಿಗಳನ್ನು ನಿಭಾಯಿಸುವುದು ಕಷ್ಟವೆಂದು ಸಮಜಾಯಿಷಿ ನೀಡಿದೆ.ಸ್ಕಾಂಡಿನೇವಿಯ ಮಾಜಿ ತಪಾಸಕರ ಜತೆ ಶ್ರೀಲಂಕಾ ಉದ್ವಿಗ್ನ ಸಂಬಂಧ ಹೊಂದಿದ್ದರೂ ಪ್ರಮುಖ ಮಾಜಿ ಸಂಧಾನಕಾರ ರಾಷ್ಟ್ರ ನಾರ್ವೆ ಅದರ ಮುಖ್ಯ ಸಮಸ್ಯೆಯಾಗಿತ್ತು.ಬ್ರಿಟನ್ ಡೇವಿಡ್ ಮಿಲಿಬ್ಯಾಂಡ್ ಮತ್ತು ಫ್ರಾನ್ಸ್ ಬರ್ನಾರ್ಡ್ ಕೌಚನಾರ್ ಅವರ ಭೇಟಿಯನ್ನು ಶ್ರೀಲಂಕಾ ನಿಷೇಧಿಸಿಲ್ಲ.
ಅವರು ಯೋಜನೆಯಂತೆ ಮುಂದುವರಿಯಲಿದ್ದಾರೆಂದು ಬಿಲ್ಟ್ ಹೇಳಿದ್ದಾರೆ. ಶ್ರೀಲಂಕಾದ ಕ್ರಮ ತೀವ್ರ ವಿಚಿತ್ರ ನಡವಳಿಕೆಯಾಗಿದೆಯಂದು ಬಿಲ್ಟ್ ತಿಳಿಸಿದ್ದು, ಶ್ರೀಲಂಕಾದ ಉನ್ನತ ಸ್ವೀಡನ್ ರಾಜತಾಂತ್ರಿಕ ಬೋರ್ಜ್ ಮ್ಯಾಟ್‌ಸನ್ ಅವರನ್ನು ಸಮಾಲೋಚನೆಗೆ ಕರೆಸಿದ್ದಾರೆ.
ಎಲ್‌ಟಿಟಿಇ ಜತೆ ಸಮರದಿಂದ ನಿರಾಶ್ರಿತರಾದ ಹತ್ತಾರು ಸಾವಿರ ನಾಗರಿಕರ ಯೋಗಕ್ಷೇಮ ನೋಡಿಕೊಳ್ಳುವ ಸವಾಲಿನ ಜತೆ ಎಲ್ಲ ಪ್ರತಿನಿಧಿಗಳನ್ನು ನಿಭಾಯಿಸುವುದು ಕಷ್ಟ ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಲ್ಡ್ ಅವರಿಗೆ ಮುಂದಿನ ತಿಂಗಳು ಬರುವಂತೆ ಆಮಂತ್ರಣ ನೀಡಲಾಗಿದೆ ಎಂದು ಅವರು ಹೇಳಿದರು. |