ಮುಲ್ಲೈತಿವು ತೀರದ ಗುಂಡು ಹಾರಾಟ ನಿಷೇಧ ವಲಯದ ಪ್ರದೇಶವನ್ನು ಸಮೀಪಿಸಿದ 6 ಎಲ್‌ಟಿಟಿಇ ದೋಣಿಗಳನ್ನು ನಾಶ ಮಾಡುವ ಮೂಲಕ ಶ್ರೀಲಂಕಾ ನೌಕಾದಳ ಸಮುದ್ರ ಮಾರ್ಗವಾಗಿ ಎಲ್‌ಟಿಟಿಇ ದಾಳಿಯನ್ನು ತಪ್ಪಿಸಿದೆ.
ನಾಲ್ಕು ಆತ್ಮಾಹುತಿ ದೋಣಿಗಳು ಸೇರಿದಂತೆ 6 ಸಣ್ಣ ದೋಣಿಗಳ ಎಲ್‌ಟಿಟಿಇ ಪಡೆಯು ಗುಂಡು ಹಾರಾಟ ನಿಷೇಧ ವಲಯದ ವಲ್ಲೈಮುಲ್ಲಿವೈಕಾಲ್ ಪ್ರದೇಶದಲ್ಲಿ ಸೇನಾಪಡೆಗಳ ಮೇಲೆ ದಾಳಿ ನಡೆಸಿತೆಂದು ಅಧಿಕಾರಿಗಳು ಹೇಳಿದ್ದಾರೆ.
ನೌಕಾಪಡೆ ಪ್ರತಿದಾಳಿ ನಡೆಸಿ ಎಲ್ಲ 6 ದೋಣಿಗಳನ್ನು ನಾಶ ಮಾಡಿತು ಮತ್ತು ಕನಿಷ್ಠ 25 ಸೀ ಟೈಗರ್‌ಗಳು ಈ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆಂದು ತಿಳಿಸಿದ್ದಾರೆ. ಶ್ರೀಲಂಕಾದ ನೌಕಾದಳ ಸೋಮವಾರ ಎಲ್‌ಟಿಟಿಇ ದೋಣಿಯನ್ನು ನಾಶ ಮಾಡಿ, ಅದೇ ಪ್ರದೇಶದಲ್ಲಿ ನಾಲ್ಕು ಬಂಡುಕೋರರನ್ನು ಹತ್ಯೆ ಮಾಡಿದೆ. ಶ್ರೀಲಂಕಾ ಸೇನೆ ಮಂಗಳವಾರ ಎರಡು ವ್ಯಾಘ್ರಗಳ ರಕ್ಷಣಾ ಕೋಟೆಗಳನ್ನು ಬೇದಿಸಿ 9 ಉಗ್ರರನ್ನು ಕೊಂದಿವೆ. |