ಪಾಕಿಸ್ತಾನವನ್ನು ತೀರಾ 'ಎಲುಬು ಮುರಿದುಕೊಂಡ' ರಾಷ್ಟ್ರ ಎಂದು ಅಮೆರಿಕದ ಉಪಾಧ್ಯಕ್ಷ ಜೋಯಿ ಬಿಡೆನ್ ತಿಳಿಸಿದ್ದು, ಭಾರತವನ್ನು ತನ್ನ ಶತ್ರುವಲ್ಲವೆಂದು ಕಾಣಲು ಇಸ್ಲಾಮಾಬಾದ್‌ಗೆ ಸಾಂಸ್ಕೃತಿಕ ಬದಲಾವಣೆ ಅಗತ್ಯವಾಗಿದೆಯೆಂದು ಹೇಳಿದ್ದಾರೆ.
ಹೋಸ್ಟನ್‌ನಲ್ಲಿ ನಡೆದ ನಿಧಿ ಸಂಗ್ರಹಿಸುವ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಮೇಲಿನಂತೆ ತಿಳಿಸಿದರು. ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿಯಲ್ಲಿ ದೀರ್ಘ ಸೇವಾವಧಿ ಕಾರಣದಿಂದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರೆಂದು ಹೆಸರಾದ ಬಿಡೆನ್, ಭಾರತದ ವಿರುದ್ಧ ಶತ್ರುತ್ವ ಮನಸ್ಥಿತಿಯಿಂದ ಪಾಕಿಸ್ತಾನ ಹೊರಬರುವ ಅಗತ್ಯವಿದೆಯೆಂದು ನುಡಿದರು.
ಪಾಕಿಸ್ತಾನಕ್ಕೆ ಭಾರತದ ಬಗ್ಗೆ ಇರುವ ವೈರತ್ವವನ್ನು ಗಮನಿಸಿದ ಉಪಾಧ್ಯಕ್ಷರು, ಪಾಕ್ ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಲು ಸಾಂಸ್ಕೃತಿಕ ಬದಲಾವಣೆ ಅಗತ್ಯವಾಗಿದೆಯೆಂದು ಹೇಳಿದ್ದಾರೆ.ಭಾರತ ತನ್ನ ಶತ್ರುವಲ್ಲವೆಂದು ತಿಳಿಯಲು ಒಟ್ಟಾರೆ ಸಾಂಸ್ಕೃತಿಕ ಬದಲಾವಣೆ ಅಗತ್ಯವಾಗಿದೆ.
ಭಾರತ ತನ್ನ ಶತ್ರುವಲ್ಲವೆಂದು, ತನ್ನ ಶತ್ರುಗಳು ಫಾಟಾ, ಆ ಸಂಘಟನೆಯ ಮೆಹಸೂದ್, ಅಲ್ ಖಾಯಿದಾ ಮತ್ತು ತಾಲಿಬಾನ್ ಎಂದು ಪಾಕ್ ಮನಗಾಣಬೇಕು ಎಂದು ಅವರು ಹೇಳಿದರು. ಪ್ರಜಾಪ್ರಭುತ್ವ ಚುನಾವಣೆಯು ಶಾಂತಿಯುತ ಬದಲಾಣೆಯನ್ನು ತಂದಿದ್ದು, ಮಧ್ಯಮವರ್ಗದ ಶಕ್ತಿಯನ್ನು ಸಾಬೀತುಮಾಡಿದೆ ಎಂದು ಹೇಳಿದ ಬಿಡೆನ್, ನೂತನ ಸರ್ಕಾರವು ಧಾರ್ಮಿಕ ಸಿದ್ಧಾಂತದ ಆಧಾರದ ಮೇಲೆ ಸ್ಥಾಪಿಸಿದ್ದಲ್ಲ ಎಂದು ನುಡಿದಿದ್ದಾರೆ. |