ಇಸ್ಲಾಮಾಬಾದ್, ಗುರುವಾರ, 30 ಏಪ್ರಿಲ್ 2009( 08:54 IST )
ಪಾಕಿಸ್ಥಾನದ ವಾಯವ್ಯ ಗಡಿಯ ದೇರಾ ಇಸ್ಮಾಯಿಲ್ ಖಾನ್ ಪ್ರಾಂತ್ಯ ಪ್ರದೇಶದಲ್ಲಿ ಶವ ಮೆರವಣಿಗೆ ಸಾಗುತ್ತಿದ್ದ ವೇಳೆ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳ ಬಗ್ಗೆ ಇದುವರೆಗೆ ವರದಿಯಾಗಿಲ್ಲ. ಬಾಂಬ್ ಸ್ಫೋಟದ ಬಗ್ಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊಣೆಯನ್ನು ಹೊತ್ತಿಲ್ಲ.