ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬೈ ಉಗ್ರರ ದಾಳಿ: ಶಂಕಿತರ ತನಿಖೆಗೆ ಮೇ 5 ಗಡುವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ಉಗ್ರರ ದಾಳಿ: ಶಂಕಿತರ ತನಿಖೆಗೆ ಮೇ 5 ಗಡುವು
PTI
ಪಾಕಿಸ್ತಾನಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಮುಂಬೈ ದಾಳಿಯಲ್ಲಿ ಐದು ಶಂಕಿತ ಉಗ್ರಗಾಮಿಗಳ ತನಿಖೆಯನ್ನು ಮೇ 5ರೊಳಗೆ ಮುಗಿಸಬೇಕೆಂದು ಪಾಕಿಸ್ತಾನಿ ಅಧಿಕಾರಿಗಳಿಗೆ ಆದೇಶಿಸಿದೆ.

ರಾವಲ್ಪಿಂಡಿಯಲ್ಲಿರುವ ಈ ನ್ಯಾಯಾಲಯದ ನ್ಯಾಯಾಧೀಶ ಸಾಖಿ ಮಹಮ್ಮದ್ ಕಾಹುತ್, ಫೆಡರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿಗೆ ಮೇ 5ರೊಳಗೆ ಶಂಕಿತ ಆರೋಪಿಗಳ ಚಾರ್ಜ್‌ಶೀಟ್ ಸಲ್ಲಿಸಲು ನಿರ್ದೇಶಿಸಿದೆ. ಲಶ್ಕರ್ ಇ ತೊಯ್ಬಾದ ಝಾಕಿರ್ ರೆಹಮಾನ್ ಲಕ್ವಿ ಸೇರಿದಂತೆ ಜಹರ್ ಶಾಹ್, ಹಮದ್ ಅಮಿನ್ ಸಾದಿಕ್, ಅಬು ಅಲ್ ಕಾಮಾ ಹಾಗೂ ಶಾಹಿದ್ ಜಮೀಲ್ ರಿಯಾಜ್ ಅವರೇ ಮುಂಬೈ ಉಗ್ರರ ದಾಳಿಯಲ್ಲಿ ಶಂಕಿತ ಆರೋಪಿಗಳು.

ಈ ನ್ಯಾಯಾಲಯದಲ್ಲಿ ಇದೀಗ ಈ ಐದು ಶಂಕಿತ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ರಾವಲ್ಪಿಂಡಿ ಅಡಿಯಾಲಾ ಜೈಲ್‌ಗೆ ಭಾರೀ ಭದ್ರತೆ ಕಲ್ಪಿಸಲಾಗಿದೆ. ಪಾಕಿಸ್ತಾನ ಆಂತರಿಕ ಸಚಿವ ರೆಹಮಾನ್ ಮಲ್ಲಿಕ್ ಅವರು ಇತ್ತೀಚೆಗೆ ಆರು ಮಂದಿ ಶಂಕಿತ ಉಗ್ರಗಾಮಿಗಳು ಮುಂಬೈ ದಾಳಿಯ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂಬುದ್ನನು ಖಚಿತಪಡಿಸಿದ್ದರು. ಆದರೆ ಈ ಶಂಕಿತರ ವಿವರಗಳು ಮಾತ್ರ ಈವರೆಗೂ ಬಹಿರಂಗಗೊಂಡಿರಲಿಲ್ಲ.

180 ಜನ ಅಮಾಯಕ ಭಾರತೀಯರ ಸಾವಿಗೆ ಕಾರಣವಾದ ಮುಂಬೈ ಉಗ್ರರ ದಾಳಿಯ ಬಗ್ಗೆ ಭಾರತ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಲಷ್ಕರ್ ಇ ತೊಯ್ಬಾವನ್ನು ಬೊಟ್ಟು ಮಾಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕಕ್ಕೂ ವ್ಯಾಪಿಸಿ ಬಲಿ ತೆಗೆದುಕೊಂಡ ಹಂದಿಜ್ವರ
ಇಸ್ಲಾಮಾಬಾದ್‌ನಲ್ಲಿ ಬಾಂಬ್‌ ಸ್ಫೋಟ
ಅಫ್ಘಾನ್: 42 ಉಗ್ರರ ಬಲಿ
ಇಸ್ಲಾಮಾಬಾದ್: ಡಾಗರ್ ಪಟ್ಟಣ ಸೇನೆ ವಶಕ್ಕೆ
ಕ್ಷಮೆ ಕೋರದಿದ್ದರೆ ಅಣ್ವಸ್ತ್ರ ಪರೀಕ್ಷೆ: ಉ.ಕೊರಿಯ ಎಚ್ಚರಿಕೆ
ಶ್ರೀಲಂಕಾ-ಕಾರ್ಯಾಚರಣೆ ನಿಲ್ಲಿಸಲು ಬ್ರಿಟನ್ ಒತ್ತಾಯ