ಭಾರತಕ್ಕೆ ಪಾಕಿಸ್ತಾನದಿಂದ ಇರುವ ತೊಂದರೆಯನ್ನು 'ಬಹುದೊಡ್ಡ ಬೆದರಿಕೆ' ಎಂಬಂತೆ ಅಪಾರ್ಥ ಮಾಡಲಾಗಿದೆ ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇದೀಗ ಪಾಕಿಸ್ತಾನ ಪರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.ತಮ್ಮ 100ನೇ ದಿನವನ್ನು ಆಚರಿಸಿಕೊಂಡ ಒಬಾಮಾ ಪತ್ರಿಕಾಗೋಷ್ಠಿಯಲ್ಲಿ ಭಾರತ ಪಾಕಿಸ್ತಾನ ನಡುವಿನ ವೈರತ್ವವನ್ನು ಹೀಗೆ ವಿವರಿಸಿದರು. ಪಾಕಿಸ್ತಾನದ ಚಿಂತಾಜನಕ ಪರಿಸ್ಥಿತಿಗೆ ತಮ್ಮ ಕಾಳಜಿಯ ದ್ವನಿಯೆತ್ತಿದ ಒಬಾಮಾ, ಇಸ್ಲಾಮಾಬಾದ್‌ನ ಅಣ್ವಸ್ತ್ರಗಳೆಲ್ಲವೂ ತುಂಬ ಸುರಕ್ಷಿತವಾಗಿ ಹಾಗೂ ಯಾವುದೇ ತೊಂದರೆ ಉಂಟುಮಾಡದ ಪರಿಸ್ಥಿತಿಯಲ್ಲಿ ಇದೆ ಎಂಬ ಬಗ್ಗೆ ಅಮೆರಿಕಕ್ಕೆ ವಿಶ್ವಾಸವಿದೆ ಎಂದರು.ಪಾಕಿಸ್ತಾನ ಇದೀಗ ಉಗ್ರವಾದವನ್ನು ಹತ್ತಿಕ್ಕಲು ಶ್ರಮವಹಿಸಿ ಕೆಲಸ ಮಾಡುತ್ತಿದೆ ಹಾಗೂ ಆ ಬಗ್ಗೆ ಗಂಭೀರ ಕಾರ್ಯಕ್ರಮಗಳನ್ನು ರೂಪಿಸಿದೆ. ಪಾಕಿಸ್ತಾನದ ಶಸ್ತ್ರಾಗಾರವೂ ಸಾಕಷ್ಟು ಭದ್ರತೆಯಿಂದ ಕೂಡಿದೆ. ಆದರೆ, ಅದನ್ನು ತಪ್ಪಾಗಿ ತಿಳಿದುಕೊಳ್ಳಲಾಗಿದೆ ಎಂದು ವಿವರಿಸಿದರು.ಇದೇ ಸಂದರ್ಭ, ಅಮೆರಿಕ ಹಾಗೂ ಪಾಕಿಸ್ತಾನ ಮಿಲಿಟರಿಗಳು ಸೌಹಾರ್ದಯುತ ಸಹಕಾರದಲ್ಲಿ ಕೆಲಸ ಮಾಡುತ್ತಿವೆ ಎಂದೂ ತಿಳಿಸಿದರು. ಪಾಕಿಸ್ತಾನದ ಪ್ರಜಾಸರ್ಕಾರಕ್ಕೆ ನಾಗರಿಕರಿಗೆ ಕನಿಷ್ಟ ಸೌಕರ್ಯಗಳನ್ನು ಒದಗಿಸಲು ಕೂಡಾ ಅಸಾಧ್ಯವಾಗಿರುವಷ್ಟು ದುರ್ಬಲ ಸ್ಥಿತಿಯಲ್ಲಿದೆ ಎಂದು ಒಬಾಮಾ ಹೇಳಿದರು. |