ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹುಡುಗಿಯರೇ, ಜೀನ್ಸು ಧರಿಸಬೇಡಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಡುಗಿಯರೇ, ಜೀನ್ಸು ಧರಿಸಬೇಡಿ!
IFM
ಇನ್ನು ಮುಂದೆ ಜೀನ್ಸ್ ಧರಿಸಿಕೊಂಡು ಕಾಲೇಜಿಗೆ ಬರುವಂತಿಲ್ಲ. ಗಾಬರಿಯಾಗಬೇಡಿ. ಇದು ನಿಮ್ಮ ಕಾಲೇಜಿನ ಕಟ್ಟಪ್ಪಣೆಯಂತೂ ಅಲ್ಲ. ಪಾಕಿಸ್ತಾನದ ಲಾಹೋರ್‌ನ ಪ್ರತಿಷ್ಠಿತ ಕಾಲೇಜೊಂದು ತನ್ನ ಹೆಣ್ಣುಮಕ್ಕಳಿಗೆ ಈ ರೀತಿಯ ನಿಯಮಾವಳಿ ರೂಪಿಸಿದೆ.

ಕಾಲೇಜಿನ ನೂತನ ನಿಯಮಾವಳಿ ಪ್ರಕಾರ, ಕೇವಲ ಜೀನ್ಸ್ ಅಷ್ಟೇ ಅಲ್ಲ. ಮಾದಕವಾಗಿರುವ, ಮೈಮಾಟ ಪ್ರದರ್ಶಿಸುವ ಯಾವುದೇ ವಸ್ತ್ರಗಳನ್ನು ಧರಿಸಬಾರದು. ಕೇವಲ ಶಾಲು ಹೊಂದಿರುವ ಚೂಡಿದಾಗಳನ್ನು ಮಾತ್ರ ಧರಿಸಬಹುದು.

ಉಗ್ರರ ಭೀತಿಯಿಂದ ಈ ನಿಯಮ ಈ ಕಿನ್ನೈರ್ಡ್ ಕಾಲೇಜಿನಲ್ಲಿ ಜಾರಿಗೊಳಿಸಲಾಗಿದೆಯಂತೆ. ಕಾಲೇಜಿನ ಉಪಪ್ರಾಂಶುಪಾಲ ನಿಖತ್ ಖಾನ್ ಹೇಳುವಂತೆ, ಇದು ಹೊಸಕಾನೂನೇನನಲ್ಲ. ಈ ಮೊದಲೂ ಈ ನಿಯಮ ಜಾರಿಯಲ್ಲಿತ್ತು. ಆದರೆ ಈಗಷ್ಟೆ ಹೊಸ ಪ್ರಾಂಶುಪಾಲರು ಬಂದಿದ್ದು ಅವರಿಗೆ ಈ ಹಳೇ ನಿಯಮದ ಬಗ್ಗೆ ಅರಿವಿರಲಿಲ್ಲ. ಹಾಗಾಗಿ ಅದನ್ನೇ ಲಾಭವೆಂದು ಪರಿಗಣಿಸಿ ಹುಡುಗಿಯರು ಮತ್ತೆ ಜೀನ್ಸು ಧರಿಸಿ ಕಾಲೇಜಿಗೆ ಬರತೊಡಗಿದರು. ಈಗ ಅದಕ್ಕೆ ಮತ್ತೆ ಈ ನಿಯಮವ್ವು ಬಿಗಿಗೊಳಿಸಲಾಗಿದೆ ಎನ್ನುತ್ತಾರೆ.
IFM

ಡ್ರೆಸ್ ಕೋಡ್ ನಿಯಮದ ಸುತ್ತೋಲೆಯನ್ನು ಸರ್ಕಾರ ಎಲ್ಲ ಕಾಲೇಜುಗಳಿಗೂ ಕಳುಹಿಸಿದೆ. ಇದರಿಂದ ಪ್ರೇರಿತರಾಗಿ ಈ ನಿಯಮ ಮಾಡಲಾಗಿದೆ ಎಂದೂ ಕಾಲೇಜು ತಿಳಿಸಿದೆ. ಆದರೆ ಬುರ್ಖಾ ಧರಿಸುವ ವಿವಾದಕ್ಕೂ ಇದಕ್ಕೂ ಸಂಬಂಧವಿಲ್ಲ.

ಆದರೆ ವಿದ್ಯಾರ್ಥಿಗಳು ಮಾತ್ರ ಇದು ಹಳೇ ಕಾನೂನಾದರೂ ಹೊಸ ಪ್ರಾಂಶುಪಾಲರು ಬಂದ ಮೇಲೆ ಅವರಿಗೆ ಈ ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲವಾದರೂ ಜೀನ್ಸು ಧರಿಸಲು ನಮಗೆ ಭಯವಾಗುತ್ತಿತ್ತು ಎಂದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ಪಾಕ್‌ನಿಂದ ಬೆದರಿಕೆ ಕೇವಲ ಅಪಾರ್ಥ: ಒಬಾಮಾ
ಮುಂಬೈ ಉಗ್ರರ ದಾಳಿ: ಶಂಕಿತರ ತನಿಖೆಗೆ ಮೇ 5 ಗಡುವು
ಅಮೆರಿಕಕ್ಕೂ ವ್ಯಾಪಿಸಿ ಬಲಿ ತೆಗೆದುಕೊಂಡ ಹಂದಿಜ್ವರ
ಇಸ್ಲಾಮಾಬಾದ್‌ನಲ್ಲಿ ಬಾಂಬ್‌ ಸ್ಫೋಟ
ಅಫ್ಘಾನ್: 42 ಉಗ್ರರ ಬಲಿ
ಇಸ್ಲಾಮಾಬಾದ್: ಡಾಗರ್ ಪಟ್ಟಣ ಸೇನೆ ವಶಕ್ಕೆ