ಕರಾಚಿ: ಅಪರಿಚಿತ ಬಂದೂಕುದಾರಿಗಳು ಗುರುವಾರ ಗುಂಡಿನ ಸುರಿಮಳೆ ಸುರಿಸಿದ ಜನಾಂಗೀಯ ಹಿಂಸಾಚಾರದಲ್ಲಿ 29 ಮಂದಿ ಸಾವನ್ನಪ್ಪಿದ ಬಳಿಕ ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿಯಲ್ಲಿ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಲಾಗಿದೆ.
ಮುತ್ತಹಿದಾ ಖ್ವಾಮಿ ಮೂಮೆಂಟ್ (ಎಂಕ್ಯೂಎಂ) ಮತ್ತು ಅಲ್ಪ ಸಂಖ್ಯಾತ ಪಶ್ತೂನ್ ಸಮುದಾಯದ ಮಧ್ಯೆ ಕಲಹ ಏರ್ಪಟ್ಟಿದ್ದು, ಇಪ್ಪತ್ತು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. |