ವಿಶ್ವಸಂಸ್ಥೆ: ಶ್ರೀಲಂಕಾದಲ್ಲಿ ನಿರ್ವಸಿತ ತಮಿಳು ನಾಗರಿಕರ ಪರಿಸ್ಥಿತಿಯು ತೃಪ್ತಿಕರವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ವಿಶ್ವಸಂಸ್ಥೆ, ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಸುಮಾರು 50 ಸಾವಿರಕ್ಕೂ ಹೆಚ್ಚು ತಮಿಳರ ರಕ್ಷಣೆಗೆ ಪ್ರಥಮ ಆದ್ಯತೆ ಎಂದು ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಮಾನವೀಯ ವ್ಯವಹಾರಗಳ ವಿಭಾಗದ ಅಧೀನ ಕಾರ್ಯದರ್ಶಿ ಜಾನ್ ಹೋಮ್ಸ್ ಅವರು, ಸೇನೆ ಮತ್ತು ಎಲ್ಟಿಟಿಇ ವ್ಯಾಘ್ರರ ನಡುವಣ ಹೋರಾಟದಿಂದ ಪೀಡಿತರಾದ 1.75 ಲಕ್ಷ ಮಂದಿ ನಾಗರಿಕರಿಗಾಗಿ ವಿಶ್ವಸಂಸ್ಥೆ ಹಾಗೂ ಸರಕಾರೇತರ ಸಂಘಟನೆಗಳು ಕೊಡಮಾಡಿದ ಆಹಾರ, ನೀರು ಮತ್ತು ಇತರ ಮೂಲಭೂತ ಸಾಮಗ್ರಿಗಳನ್ನು ತಲುಪಿಸಲಾಗುತ್ತಿದೆ ಎಂದು ಹೇಳಿದರು. |