ಶಾಲೆಗೆ ಹೋಗುವಾಗ ದುಪಟ್ಟಾ ಧರಿಸುವಂತೆ ಮತ್ತು ಪುರುಷರೊಂದಿಗೇ ಹೋಗುವಂತೆ ಪಾಕಿಸ್ತಾನದ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರಿಗೆ ಎಚ್ಚರಿಸಿರುವ ತಾಲಿಬಾನ್-ಪರವಾಗಿರುವ ಉಗ್ರಗಾಮಿಗಳು, ಇಲ್ಲವಾದಲ್ಲಿ ಸೂಕ್ತ ಕ್ರಮ ಎದುರಿಸಬೇಕೆಂದು ಧಮಕಿ ಹಾಕಿದ್ದಾರೆ. ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್‌ನ ರಾಜಧಾನಿ ಪೇಶಾವರದ ಬಳಿಯ ಅಚಿನಿ ಎಂಬಲ್ಲಿನ ಬಾಲಕಿಯರ ಶಾಲೆಗೆ ನುಗ್ಗಿದ ಶಸ್ತ್ರಧಾರಿ ಉಗ್ರಗಾಮಿಗಳು, ಈ ರೀತಿ ಬೆದರಿಕೆ ಹಾಕಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಮಾತ್ರವಲ್ಲ, ಪುರುಷರು ಟೋಪಿ ಧರಿಸಬೇಕೆಂದೂ ಇಲ್ಲವಾದಲ್ಲಿ ಕಠಿಣ ಪರಿಸ್ಥಿತಿ ಎದುರಾದೀತೆಂದೂ ಉಗ್ರರು ಎಚ್ಚರಿಕೆ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ಕಷ್ಟ ಎಂದು ಶಿಕ್ಷಕಿಯರು ಇದೀಗ ಶಿಕ್ಷಣ ಇಲಾಖೆಯ ಅಧಿಕಾರಿಗಳೆದುರು ಅಳಲು ತೋಡಿಕೊಂಡಿದ್ದಾರೆ ಮತ್ತು ರಕ್ಷಣೆ ಕೋರಿದ್ದಾರೆ. |