ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳನ್ನು ಜಾಗತಿಕ ಭಯೋತ್ಪಾದನೆಯ 'ಪಾಲನಾ ಕೇಂದ್ರ' ಎಂದು ಬಣ್ಣಿಸಿರುವ ಬ್ರಿಟನ್, ಅಲ್ಲಿಂದ ಉದ್ಭವವಾಗುತ್ತಿರುವ ಬೆದರಿಕೆಯನ್ನು ಹತ್ತಿಕ್ಕಲು ಬದ್ಧತೆಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದೆ.
ಆಫ್-ಪಾಕ್ ನೀತಿಯ ಅಂಗವಾಗಿ, ಮುಂದಿನ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನಕ್ಕೆ 665 ದಶಲಕ್ಷ ಪೌಂಡ್ ಹೆಚ್ಚುವರಿ ನೆರವು ನೀಡುವುದಾಗಿ ಘೋಷಿಸಿರುವ ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್, ಆಫ್ಘನ್ ಪಡೆಗಳ ಬಲವನ್ನು 54 ಸಾವಿರದಷ್ಟು ಹೆಚ್ಚಿಸಲು ಇದು ನೆರವಾಗಲಿದೆ ಎಂದಿದ್ದಾರೆ. |