ತೈಲ ಸಂಪತ್ಬರಿತ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ಬಾಲ್ಯ ವಿವಾಹ ಕುರಿತಂತೆ ಅಂತಾರಾಷ್ಟ್ರೀಯ ಹಾಗೂ ಸ್ಥಳೀಯರಿಂದ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ 8 ವರ್ಷದ ಬಾಲೆಗೆ ವಿಚ್ಚೇದನ ಅರ್ಜಿಗೆ ಸಮ್ಮತಿ ಸೂಚಿಸಿದೆ.
50 ವರ್ಷದ ವ್ಯಕ್ತಿಯೊಬ್ಬ 8 ವರ್ಷದ ಬಾಲೆಯನ್ನು ವಿವಾಹವಾಗಿದ್ದ. ಬಾಲೆಯ ತಾಯಿ ಮಗಳಿಗೆ ವಿಚ್ಚೇದನ ನೀಡಲು ಅನುಮತಿ ನೀಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಎರಡು ಬಾರಿ ಮನವಿ ಸಲ್ಲಿಸಿದ್ದಳು. ಆದರೆ ನ್ಯಾಯಾಲಯ ಎರಡು ಬಾರಿಯೂ ವಿಚ್ಚೇದನ ಅರ್ಜಿಯನ್ನು ತಿರಸ್ಕರಿಸಿತ್ತು. ಬಾಲೆಯ ಪರ ವಕೀಲರು ನ್ಯಾಯಾಲಯದ ಹೊರಗೆ ವಿಚ್ಚೇದನವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದರು.
ಬಾಲೆಯ ತಂದೆಗೆ, ತಾನು ನೀಡಿದ 8 ಸಾವಿರ ಡಾಲರ್ ಸಾಲದಿಂದ ಮುಕ್ತಗೊಳಿಸುವುದಾಗಿ ಅಮಿಷ ತೋರಿಸಿ ಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ಮನವೊಲಿಸಿದ್ದ ಎನ್ನಲಾಗಿದೆ.
ಸೌದಿಯ ಕಾನೂನು ಸಲಹಾ ಸಮಿತಿ ಮದುವೆಗೆ ಕನಿಷ್ಠ 18 ವರ್ಷಗಳಾಗಿರಬೇಕು ಎನ್ನುವುದನ್ನು ರಾಜನ ಗಮನಕ್ಕೆ ತಂದಿದ್ದರಿಂದ ಬಾಲೆಗೆ ವಿಚ್ಚೇಧನಕ್ಕಾಗಿ ಅನುಮತಿ ದೊರೆತಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
|