ಜಾಗತಿಕ ಉಗ್ರಗಾಮಿ ಸಂಘಟನೆ ಅಲ್-ಕೈದಾ ಬುಡಕಟ್ಟು ಪ್ರದೇಶಗಳನ್ನು ಬಳಸಿಕೊಂಡು ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದು, ಇರಾನ್ ಭಯೋತ್ಪಾದಕತೆಯನ್ನು ಪ್ರಾಯೋಜಿಸುವ ಪ್ರಮುಖ ತಾಣವಾಗಿದೆ ಎಂದು ಅಮೆರಿಕ ಹೇಳಿದೆ.
2001ರ ಸೆಪ್ಟೆಂಬರ್ 11 ರ ದಾಳಿಯ ನಂತರ ಅಲ್-ಕೈದಾ ಚೇತರಿಸಿಕೊಂಡು ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, ಇರಾನ್ ,ಸಿರಿಯಾ, ಸೂಡಾನ್ ಮತ್ತು ಕ್ಯೂಬಾ ರಾಷ್ಟ್ರಗಳವರೆಗೆ ಆವರಿಸಿದೆ ಎಂದು ಅಮೆರಿಕದ ಗೃಹ ಇಲಾಖೆ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಅಲ್-ಕೈದಾ ಸಂಘಟನೆ ಆರ್ಥಿಕ ಹಾಗೂ ಜನಬೆಂಬಲವನ್ನು ಕಳೆದುಕೊಂಡ ನಂತರವೂ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳಿಗೆ ಬಹುದೊಡ್ಡ ಬೆದರಿಕೆಯಾಗಿದೆ ಎಂದು ವರದಿಯಲ್ಲಿ ಪ್ರಕಟಿಸಿದೆ.
ಪಾಕಿಸ್ತಾನದ ಗಡಿಪ್ರದೇಶದಲ್ಲಿರುವ ಕೆಲ ಬುಡಕಟ್ಟು ಪ್ರದೇಶಗಳನ್ನು ತಮ್ಮ ತಾಣವಾಗಿಸಿಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಿರುವ ಬಗ್ಗೆ ಅನೇಕ ಸಾಕ್ಷಾಧಾರಗಳು ಲಭ್ಯವಾಗಿವೆ ಎಂದು ಅಮೆರಿಕ ವಾರ್ಷಿಕ ವರದಿಯಲ್ಲಿ ಬಹಿರಂಗಪಡಿಸಿದೆ.
|