ವಾಷಿಂಗ್ಟನ್: ನೂತನ ಆಫ್-ಪಾಕ್ ನೀತಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜಾಯಿ ಮತ್ತು ಪಾಕಿಸ್ತಾನದ ಆಸಿಫ್ ಅಲಿ ಜರ್ದಾರಿ ಅವರೊಂದಿಗೆ ಮುಂದಿನ ವಾರ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಒಬಾಮ ಆಡಳಿತದಡಿಯಲ್ಲಿ ಇದು ಮೊದಲ ತ್ರಿಪಕ್ಷೀಯ ಮಾತುಕತೆಯಾಗಲಿದೆ. |