ತನ್ನನ್ನು ತಾನೇ ಇಟಲಿ ರಾಜಕೀಯದ ಏಸುಕ್ರಿಸ್ತ ಎಂದು ಕರೆದುಕೊಂಡಿದ್ದ ಇಟಲಿ ಪ್ರಧಾನಿ ಸಿಲ್ವಿಯೋ ಬೆರ್ಲುರ್ಸ್ಕೋನಿ ಅವರು ಇದೀಗ ತನ್ನನ್ನು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಕರೆದುಕೊಂಡಿದ್ದಾರೆ.
ಜನಮತಗಣನೆಯಲ್ಲಿ ಶೇ. 75ಕ್ಕಿಂತಲೂ ಅಧಿಕ ಮಂದಿ ತಾನು ಜನಪ್ರಿಯ ನಾಯಕ ಎಂದು ಹೇಳಿದ್ದು, ತಾನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಥವಾ ಇನ್ಯಾವುದೇ ನಾಯಕರಿಗಿಂತ ಹೆಚ್ಚು ಜನಪ್ರಿಯನಾಗಿದ್ದೇನೆ ಎಂಬುದಾಗಿ 72ರ ಹರೆಯದ ಸಿಲ್ವಿಯೋ ಹೇಳಿದ್ದಾರೆ.
ಜನಮತಗಣನೆಯಲ್ಲಿ ಒಬಾಮ ಅವರಿಗೆ ಶೇ.59 ಮತಗಳು ಬಿದ್ದಿದ್ದರೆ, ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋರಿಗೆ ಶೇ.60ರಷ್ಟು ಮತಗಳು ಬಿದ್ದಿವೆ.
ಸಿಲ್ವಿಯೋ ಅವರು ಜನಪ್ರಿಯತೆಯನ್ನು ಹೊಂದಿದ್ದರೂ ಅವರು ಹೇಳಿಕೊಳ್ಳುವಷ್ಟು ಅಲ್ಲ ಎಂಬುದಾಗಿ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಸಿಲ್ವಿಯೋ ಅವರು ತಮ್ಮ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾಮಣಿಗಳನ್ನು ಹೊಂದಿರುವುದಕ್ಕೆ ಇತ್ತೀಚೆಗೆ ತನ್ನ ಪತ್ನಿ ವೆರೋನಿಕಾರಿಂದ ಉಗಿಸಿಕೊಂಡಿದ್ದರು. |