ಭದ್ರತಾ ಠಾಣೆ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ ವೇಳೆ ಪಾಕಿಸ್ತಾನಿ ಪಡೆಗಳು ನಡೆಸಿದ ಗುಂಡಿನ ಕಾಳಗದಲ್ಲಿ 16 ಉಗ್ರರು ಮತ್ತು ಇಬ್ಬರು ಸೈನಿಕರು ಸಾವನ್ನಪ್ಪಿರುವ ಘಟನೆ ಅಫ್ಘಾನ್ ಗಡಿಪ್ರದೇಶದ ಬುಡಕಟ್ಟು ಪ್ರದೇಶದಲ್ಲಿ ಸಂಭವಿಸಿದೆ.
ಮೊಹಮಂದ್ ಬುಡಕಟ್ಟು ಪ್ರಾಂತ್ಯದಲ್ಲಿ ಸ್ಪಿಂಕಿ ತಂಗಿ ಠಾಣೆಯ ಮೇಲೆ ಉಗ್ರರು ನಸುಕಿಗೂ ಮುಂಚಿನ ಅವಧಿಯಲ್ಲಿ ದಾಳಿ ನಡೆಸಿದ್ದು, ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಏಳು ಬುಡಕಟ್ಟು ಜಿಲ್ಲೆಗಳಲ್ಲಿ ಮೊಹಮಂದ್ ಸಹ ಒಂದಾಗಿದೆ. ಇಲ್ಲಿ ತಾಲಿಬಾನ್ ಉಗ್ರರು ಪದೇಪದೇ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. |