ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಗಳು ಆ ಭಾಗವನ್ನು ತ್ಯಜಿಸಿ, ಶಾಂತಿ ಸ್ಥಾಪನೆಗೆ ಅವಕಾಶ ಮಾಡಿಕೊಂಡದಿದ್ದಲ್ಲಿ ವಿವಾದಿತ ಶಾಂತಿ ಒಪ್ಪಂದ ಕುರಿತು ಪುನರ್ ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಶನಿವಾರ ತಿಳಿಸಿದ್ದಾರೆ.
ತಾಲಿಬಾನ್ ಜತೆ ಮಾಡಿಕೊಂಡ ಶಾಂತಿ ಒಪ್ಪಂದವನ್ನು ಇನ್ನುಳಿದ ಪ್ರದೇಶದಲ್ಲಿ ಅನುಷ್ಠಾನಕ್ಕೆ ತಾರದಿದ್ದಲ್ಲಿ, ನಾವು ಆ ಭಾಗಕ್ಕೆ ಮತ್ತೆ ಭೇಟಿ ನೀಡಿ ಪುನರ್ ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಒಪ್ಪಂದದ ಬಗ್ಗೆ ಮತ್ತೊಮ್ಮೆ ಪುನರ್ ಪರಿಶೀಲಿಸಲಾಗುವುದು, ಇದೊಂದು ಉತ್ತಮವಾದ ಬೆಳವಣಿಗೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಫೆ.16ರಂದು ಪಾಕ್ ಸರ್ಕಾರ ತಾಲಿಬಾನ್ ಬೆಂಬಲಿತ ಮುಖಂಡ ಸೂಫಿ ಮೊಹಮ್ಮದ್ ಹಾಗೂ ಎನ್‌ಡಬ್ಲ್ಯುಎಫ್‌ಪಿ ಸರ್ಕಾರದ ಜತೆ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಬಳಿಕ ತಾಲಿಬಾನ್ ಮಲ್ಕಂಡ್ ಪ್ರಾಂತ್ಯದಲ್ಲಿ ಷರಿಯಾ ಕಾನೂನುನ್ನು ಜಾರಿಗೊಳಿಸಿತ್ತು. ಇದರಲ್ಲಿ ಸ್ವಾತ್, ಬುನೇರ್ ಹಾಗೂ ಲೋವರ್ ಡಿರ್ ಪ್ರದೇಶದಲ್ಲಿಯೂ ಜಾರಿ ಮಾಡಿತ್ತು. ಇದರಿಂದಾಗಿ ಉಗ್ರರು ಪಾಕ್ ಶಾಂತಿ ಒಪ್ಪಂದಕ್ಕೆ ಸಡ್ಡು ಹೊಡೆದಿತ್ತು. ತದನಂತರ ಅಮೆರಿಕದ ಒತ್ತಡದ ನಂತರ ಇದೀಗ ಪಾಕ್ ತಾಲಿಬಾನ್ ಉಗ್ರರ ಭೇಟೆಯಲ್ಲಿ ತೊಡಗಿದೆ. |