ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಒಟ್ಟು 13 ದೇಶಗಳ 367 ಮಂದಿಯಲ್ಲಿ ಸಾಂಕ್ರಾಮಿಕ ಹಂದಿ ಜ್ವರವನ್ನು ಪತ್ತೆಹಚ್ಚಲಾಗಿದ್ದು, ಮೆಕ್ಸಿಕೊದಲ್ಲಿ ಅತೀ ಹೆಚ್ಚು ಅಂದರೆ 156 ಪ್ರಕರಣಗಳು ದೃಢಪಟ್ಟಿವೆ. ಏಷ್ಯಾದ ರಾಷ್ಟ್ರಗಳಾದ ಇಸ್ರೇಲ್‌ನಲ್ಲಿ ಎರಡು, ದಕ್ಷಿಣ ಕೊರಿಯಾ ಮತ್ತು ಹಾಂಕಾಂಗ್‌ನಲ್ಲಿ ತಲಾ ಒಂದೊಂದು ಹಂದಿ ಜ್ವರ ಪ್ರಕರಣಗಳು ಪತ್ತೆಹಚ್ಚಲಾಗಿದೆ. |