ತಮ್ಮ ಮೇಲೆ ಸೇನಾ ಕಾರ್ಯಾಚರಣೆ ನಡೆದಲ್ಲಿ ಮಾನವ ಗುರಾಣಿಯಾಗಿ ಬಳಸಿಕೊಳ್ಳಲು ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಬುನೇರ್ ಜಿಲ್ಲೆಯ ಸುಮಾರು 2,000 ಸಾವಿರ ಮಂದಿಯನ್ನು ತಾಲಿಬಾನ್ ಹಿಡಿದಿಟ್ಟುಕೊಂಡಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.
ಬುಂದೇರ್, ದಿರ್ ಮತ್ತು ಸ್ವಾತ್ ಜಿಲ್ಲೆಗಳನ್ನು ಮರುವಶಕ್ಕೆ ಪಡೆಯಲು ಸೇನೆಯು ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಿರುವ ನಿಟ್ಟಿನಲ್ಲಿ ತಾಲಿಬಾನ್ ಈ ಕ್ರಮಕ್ಕೆ ಮುಂದಾಗಿದೆ.
ಕಳೆದ ಮಂಗಳವಾರ ತಾಲಿಬಾನ್‌ನೊಂದಿಗೆ ಕಾದಾಟಕ್ಕೆ ಸೇನೆಯು ಮುಂದಾಗಿದ್ದು ಇದುವರೆಗೆ 100ಕ್ಕಿಂತಲೂ ಅಧಿಕ ಉಗ್ರರು ಹಾಗೂ ಹಲವು ಸೈನಿಕರು ಸಾವನ್ನಪ್ಪಿದ್ದಾರೆ.
ತಾಲಿಬಾನ್ ಉಗ್ರರು ಬುನೇರ್ ಜಿಲ್ಲೆಯ ಪಿರ್ ಬಾಬದಲ್ಲಿ 2000ಕ್ಕಿಂತಲೂ ಅಧಿಕ ಮಂದಿಯನ್ನು ಮಾನವ ಗುರಾಣಿಗಳಾಗಿ ಇರಿಸಿಕೊಂಡಿದ್ದಾರೆ ಎಂದು ಸಂಡೇ ಟೈಮ್ಸ್ ವರದಿ ಮಾಡಿದೆ. |