ಬಂಡುಕೋರ ತಮಿಳು ಹುಲಿಗಳು ಮಕ್ಕಳನ್ನೂ ಲಂಕಾ ಸರ್ಕಾರದ ವಿರುದ್ಧ ಹೋರಾಡಲು ಸಜ್ಜುಗೊಳಿಸಿರುವುದು ಇದೀಗ ಬಯಲಾಗಿದೆ. ಬ್ರಿಟಿಶ್ ಮೂಲದ ದಿ ಟೆಲಿಗ್ರಾಫ್ ಪತ್ರಿಕೆಯ ಜತೆಗೆ ಮಾತನಾಡಿರುವ ಲಂಕಾ ಸೇನೆಯ ಹಲವು ಹಿರಿಯ ಅಧಿಕಾರಿಗಳು ಈ ವಿಷಯವನ್ನು ದೃಢಪಡಿಸಿದ್ದಾರೆ.ಹಿರಿಯ ಲಂಕಾ ಸೇನೆಯ ಅಧಿಕಾರಿಯೊಬ್ಬರು ಹೇಳುವಂತೆ, 11ರ ಹರೆಯದ ಹೆಣ್ಣುಮಗುವೂ ಕೂಡಾ ಸೇನೆಯ ತರಬೇತಿ ಪಡೆದು ಲಂಕಾ ಸೇನೆಯ ವಿರುದ್ಧ ಹೋರಾಡುತ್ತದೆ. ಆ ಮಕ್ಕಳನ್ನು ನೋಡುತ್ತಿದ್ದರೆ ನಮ್ಮ ಸ್ವಂತ ಮಕ್ಕಳಂತೆ ಕಾಣುತ್ತದೆ. ಸತ್ತ ತಮಿಳು ಬಂಡುಕೋರರಲ್ಲಿ ಬಹಳಷ್ಟು ಸಂಖ್ಯೆಯ ತಮಿಳು ಹುಲಿಗಳು 16 ವರ್ಷದೊಳಗಿನವರು ಎಂದು ಮಾರ್ಮಿಕವಾಗಿ ಹೇಳುತ್ತಾರೆ.ಈ ಮಕ್ಕಳಲ್ಲಿ ನಾಯಿಯ ಟ್ಯಾಗ್‌ಗಳೂ, ಸೈಯನೈಡ್ ಕ್ಯಾಪ್ಸೂಲ್‌ಗಳೂ ಇರುತ್ತವೆ. ಮಕ್ಕಳಿಗೆ ಗುಂಡೇಟು ತಗುಲಿದಾಗ ಅವರ ಹೆತ್ತವರು ಮಕ್ಕಳನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಹೀಗೆ ಸೆರೆಸಿಕ್ಕವರಲ್ಲಿ ಸಣ್ಣ ಮಕ್ಕಳನ್ನು ಪುನರ್ವಸತಿ ಕಾರ್ಯಕ್ರಮದಡಿ ಸೇರಿಸಿಕೊಳ್ಳಲಾಗಿದೆ ಎನ್ನುತ್ತಾರೆ ಉತ್ತರ ಭಾಗದಲ್ಲಿ ಫಿರಂಗಿದಳದ ಕಮಾಂಡರ್ ಬ್ರಿಗ್ ಪ್ರಿಯಾಂತಾ.ರೋನ್ ಎಂದು ಪರಿಚಯಿಸಿಕೊಂಡ ಇನ್ನೊಬ್ಬ ಅಧಿಕಾರಿ ಹೇಳುವ ಪ್ರಕಾರ, ಯುಧ್ಧದಲ್ಲಿ ಮಡಿದ ಮಂದಿಯಲ್ಲಿ ಬಹುತೇಕರು ಸಣ್ಣ ವಯಸ್ಸಿನ ಸೈನಿಕರು. ಎಲ್ಲರೂ 16, 18 ವರ್ಷದೊಳಗಿನ ಮಕ್ಕಳು. ಇವರಲ್ಲಿ 12ರ ಹರೆಯದ ಮಕ್ಕಳೂ ಇದ್ದರು ಎನ್ನುತ್ತಾರೆ.57 ನೇ ವಿಭಾಗದ ಮೇಜರ್ ಜನರಲ್ ಜಗ್ಗತ್ ಡಿಯಾಸ್ ಹೇಳುವಂತೆ, ಪುತುಮಾಟಲನ್ ಲಗೂನ್ ಎಂಬ ಪ್ರದೇಶದಲ್ಲಿ ನಡೆದ ಕಾಳಗದಲ್ಲಿ ಹಲವು ನಾಗರಿಕರು ತಪ್ಪಿಸಿಕೊಂಡು ಓಡಿಹೋದರು. ಲಂಕಾ ಸೇನೆ ಹಲವು ಹುಡುಗಿಯರ ಜತೆಗೆ ಕಾಳಗ ನಡೆಸುತ್ತಿತ್ತು. ಓಡಿಹೋದ ಕಾರಣಕ್ಕೆ ಹಲವು ಮಕ್ಕಳ ಕೂದಲನ್ನು ಸಣ್ಣಗೆ ಕತ್ತರಿಸಲಾಗಿದೆ. ಆ ತಮಿಳು ಹುಲಿಗಳಲ್ಲಿ ಬಹುತೇಕರು ಹುಡುಗಿಯರು ಹಾಗೂ ಅವರ ವಯಸ್ಸು 11 ಇರಬಹುದು ಎಂಬುದೂ ಗೊತ್ತಾಗಿದೆ. ಮಕ್ಕಳನ್ನು ಹೋರಾಟದಲ್ಲಿ ಹೇಗೆ ಶೂಟ್ ಮಾಡಲಿ ಅಂತ ಅನಿಸುತ್ತದೆ. ಅವರ ಮೇಲೆ ಗುಂಡಿಕ್ಕಲು ಮನಸ್ಸಾಗುವುದಿಲ್ಲ. ಆದರೆ, ಹೋರಾಟದಲ್ಲಿ ವೈರಿ ವೈರಿಯೇ. ನಾವು ಶೂಟ್ ಮಾಡಲೇಬೇಕಾಗುತ್ತದೆ ಎಂದು ವಿವರಿಸುತ್ತಾರೆ.ತಮಿಳು ಹುಲಿಗಳ ಬಳಿಯಿರವ 10 ಮಕ್ಕಳ ಪೈಕಿ ಪ್ರತಿ ಏಳು ಮಂದಿ 15 ವರ್ಷಕ್ಕಿಂತ ಕೆಳಗಿನವರು. ಜತೆಗೆ ಬಹುತೇಕ ಎಲ್‌ಟಿಟಿಇ ಬಂಡುಕೋರರ ಪೈಕಿ ಯುವ ಮಹಿಳೆಯರೇ ಕಾಣುತ್ತಾರೆ ಎಂದೂ ಅವರು ಹೇಳುತ್ತಾರೆ. |