ದೇಶದಲ್ಲಿನ ಭಯೋತ್ಪಾದನೆಯನ್ನು ಮಟ್ಟ ಹಾಕುವುದಾಗಿ ಪುನರುಚ್ಚರಿಸಿರುವ ಶ್ರೀಲಂಕಾ ಅಧ್ಯಕ್ಷ ಮಹೀಂದಾ ರಾಜಪಕ್ಸೆ, ರಾಜಕೀಯವಾಗಿಯೇ ಎಲ್‌ಟಿಟಿಇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರದಂದು ಲಂಕಾಕ್ಕೆ ಭೇಟಿ ನೀಡಿರುವ ಜಪಾನ್‌ನ ವಿಶೇಷ ರಾಯಭಾರಿ ಯಾಸುಶಿ ಅಕಾಶಿ ಅವರೊಂದಿಗೆ ರಾಜಪಕ್ಸೆ ಮಾತುಕತೆ ನಡೆಸಿದ್ದು, ಎಲ್‌ಟಿಟಿಇಯನ್ನು ಮಟ್ಟಹಾಕಲು ಹೆಚ್ಚಿನ ಒತ್ತು ನೀಡಿ ಮಾತನಾಡಿದ್ದು, ದ್ವೀಪರಾಷ್ಟ್ರದಲ್ಲಿ ತಮಿಳು ಬಂಡುಕೋರ ನಾಯಕ ಪ್ರಭಾಕರನ್ ಭಯೋತ್ಪಾದನೆಯನ್ನು ಹುಟ್ಟುಹಾಕಿರುವುದಾಗಿ ಹೇಳಿದರು.
ದೇಶದ ಪ್ರತಿಯೊಬ್ಬ ಜನರು ಸ್ನೇಹ ಮತ್ತು ಐಕ್ಯತೆಯಿಂದ ಬದುಕು ಸಾಗಿಸಲು ಅನುವು ಮಾಡಿಕೊಡಲು ಕಟಿಬದ್ದವಾಗಿರುವುದಾಗಿ ರಾಜಪಕ್ಸೆ ನೀಡಿದ್ದು, ಸರ್ಕಾರ ಕೂಡ ಎಲ್‌ಟಿಟಿಇ ವಶದಲ್ಲಿರುವ ನಾಗರಿಕರನ್ನು ಮುಕ್ತಗೊಳಿಸಲು ಬದ್ದವಾಗಿದೆ ಎಂದರು.
ಬಂಡುಕೋರರ ಅಟ್ಟಹಾಸವನ್ನು ಮಟ್ಟಹಾಕಿ, ಶೀಘ್ರವೇ ಅದಕ್ಕೊಂದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಆಶಾಭಾವ ವ್ಯಕ್ತಪಡಿಸಿದರು.
|