ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಹೊಸ ತಿರುವನ್ನು ಪಡೆದುಕೊಳ್ಳುತ್ತಿದ್ದು, ಪ್ರಧಾನ ಮಂತ್ರಿ ಪ್ರಚಂಡ ಅವರ ರಾಜೀನಾಮೆ ಹಿನ್ನಲೆಯಲ್ಲಿ ನೂತನ ಸರಕಾರ ರಚನೆಗೆ ಅಧ್ಯಕ್ಷ ರಾಮ್ ಬರನ್ ಯಾದವ್ ಶನಿವಾರದ ವರೆಗೆ ಗಡುವು ವಿಧಿಸಿದ್ದಾರೆ. ಸೇನಾ ಮುಖ್ಯಸ್ಥನ ವಜಾಗೊಳಿಸಿದ ಪ್ರಧಾನಿಯ ತೀರ್ಮಾನವನ್ನು ಅಧ್ಯಕ್ಷ ಬರನ್ ರದ್ದುಗೊಳಿಸಿ ಮರುನೇಮಕಗೊಳಿಸಿರುವದೇ ನೇಪಾಳದಲ್ಲಿನ ಈಗಿನ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. |