ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಹಾಗೂ ಇಸ್ರೇಲ್ ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದ(ಎನ್‌ಪಿಟಿ)ಕ್ಕೆ ಕೈಜೋಡಿಸುವಂತೆ ಅಮೆರಿಕ ಬುಧವಾರ ಮತ್ತೆ ಒತ್ತಡ ಹೇರಿದೆ.
ಪರಮಾಣು ಶಸ್ತ್ರಾಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಪ್ರಮುಖ ದೇಶಗಳು ಕೈಜೋಡಿಸಬೇಕಾದ ಅಗತ್ಯವಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಪಿಟಿಗೆ ಸಹಿ ಹಾಕಿದ 189ದೇಶಗಳೊಂದಿಗೆ ಎರಡು ವಾರಗಳ ಕಾಲ ನಡೆಯಲಿರುವ 2ನೇ ದಿನದ ಸಭೆಯಲ್ಲಿ ಮಾತನಾಡಿದ ರೋಸ್ ಗೋಟ್ಟೆಮೊಲ್ಲೆರ್, ಅಮೆರಿಕ ಮತ್ತು ಭಾರತ ನಡುವಿನ ನಾಗರಿಕ ಪರಮಾಣು ಒಪ್ಪಂದ ನಡೆದಿದ್ದರೂ ಕೂಡ, ಭಾರತ ಪರಮಾಣು ಶಸ್ತ್ರಾಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದದಿಂದ ದೂರ ಉಳಿದಿರುವುದಾಗಿ ಹೇಳಿದರು.
ಆ ನಿಟ್ಟಿನಲ್ಲಿ ಇಂಡಿಯಾ, ಇಸ್ರೇಲ್, ಪಾಕಿಸ್ತಾನ ಹಾಗೂ ಉತ್ತರ ಕೊರಿಯಾ ಅಗತ್ಯವಾಗಿ ಎನ್‌ಪಿಟಿ ಒಪ್ಪಂದಕ್ಕೆ ಬದ್ದವಾಗಬೇಕಾಗಿದೆ ಎಂದು ಅಮೆರಿಕ ಆಗ್ರಹಿಸಿದೆ. |