ಪಾಕಿಸ್ತಾನ ಅಧಿಕಾರಿಗಳು ಮತ್ತು ತಾಲಿಬಾನ್ ನಡುವೆ ವಿವಾದಾತ್ಮಕ ಶಾಂತಿ ಒಪ್ಪಂದದ ಮಾತುಕತೆ ನಡೆಸಿದ ತೀವ್ರವಾದಿ ಧರ್ಮಗುರು ಸೂಫಿ ಮಹಮದ್ ಅವರ ಪುತ್ರ ದಿರ್ ಜಿಲ್ಲೆಯಲ್ಲಿ ನಡೆದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾನೆ.
ಈ ಪ್ರದೇಶದಲ್ಲಿ ಉಗ್ರಗಾಮಿಗಳ ವಿರುದ್ಧ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ದಿರ್‌ನಲ್ಲಿ ಸೂಫಿ ಮಹಮದ್ ತವರುಪಟ್ಟಣವಾದ ಮೈದಾನ್‌ನಲ್ಲಿ ನಡೆದ ಶೆಲ್ ದಾಳಿಗೆ ಸೂಫಿ ಮಹಮದ್ ಪುತ್ರ ಕಿಫಾಯತುಲ್ಲಾ ಮೃತಪಟ್ಟಿದ್ದು, ಇನ್ನೊಬ್ಬ ಸಂಬಂಧಿ ಗಾಯಗೊಂಡಿದ್ದಾನೆ.
ಸೂಫಿ ಮಹಮದ್ ನಿಷೇಧಿತ ಟಿಎನ್‍ಎಸ್‌ಎಂ ಮುಖ್ಯಸ್ಥನಾಗಿದ್ದು, ವಾಯವ್ಯ ಸ್ವಾಟ್ ಕಣಿವೆಯಲ್ಲಿ ಶರಿಯ ಅಥವಾ ಇಸ್ಲಾಮಿಕ್ ಕಾನೂನು ಜಾರಿಗೆ ಟಿಎನ್‌ಎಸ್‌ಎಂ ಪ್ರಚಾರ ನಡೆಸಿದೆ. ಸ್ವಾತ್‌ನಲ್ಲಿ ಸೂಫಿ ಮಹಮದ್ ಶಾಂತಿ ಒಪ್ಪಂದ ಕುದುರಿಸಿದ್ದರೂ, ಉಗ್ರಗಾಮಿಗಳು ಮತ್ತು ಭದ್ರತಾಪಡೆಗಳ ನಡುವೆ ಭೀಕರ ಕದನದಿಂದ ಶಾಂತಿ ಒಪ್ಪಂದ ಅಕ್ಷರಶಃ ಮುರಿದುಬಿದ್ದಿದೆ. ಭದ್ರತಾಪಡೆಗಳು ಬುನೇರ್, ದಿರ್ ಮತ್ತು ಸ್ವಾತ್ ಜಿಲ್ಲೆಗಳಲ್ಲಿ ತಾಲಿಬಾನ್ ವಿರುದ್ಧ ಕಾರ್ಯಾಚರಣೆಯಲ್ಲಿ ಫಿರಂಗಿ, ಗನ್‌ಶಿಪ್ ಹೆಲಿಕಾಪ್ಟರ್ ಮತ್ತು ಫೈಟರ್ ಜೆಟ್‌ಗಳನ್ನು ಬಳಸುತ್ತಿದೆ. |