ತಾಲಿಬಾನ್ ವಿರುದ್ಧ ಹೊಸ ನಿರ್ಣಾಯಕ ಮಿಲಿಟರಿ ಕಾರ್ಯಾಚರಣೆಯನ್ನು ಪಾಕಿಸ್ತಾನ ಗುರುವಾರ ಪ್ರಕಟಿಸಿದೆ. ವಾಯವ್ಯ ಬುಡಕಟ್ಟು ಪ್ರದೇಶದಲ್ಲಿ ನಡೆದ ಭೀಕರ ಕದನದಲ್ಲಿ 9 ಸೈನಿಕರು ಮತ್ತು 14 ಉಗ್ರಗಾಮಿಗಳು ಹತರಾಗಿದ್ದು, ವಾಯು ಮತ್ತು ಭೂಸೇನಾ ಕಾರ್ಯಾಚರಣೆಯನ್ನು ತೀಕ್ಷ್ಣಗೊಳಿಸಲು ಪಾಕ್ ಮುನ್ನಡಿ ಇರಿಸಿದೆ.
ಭಯೋತ್ಪಾದಕರ ಜತೆ ರಾಜಿ ಅಥವಾ ಅವರಿಗೆ ತಲೆಬಗ್ಗಿಸುವುದನ್ನು ತಳ್ಳಿಹಾಕಿದ ಪ್ರಧಾನಿ ಯುಸುಫ್ ರಾಜಾ ಗಿಲಾನಿ ಟೆಲಿವಿಷನ್ ಭಾಷಣದಲ್ಲಿ ಮಾತನಾಡುತ್ತಾ, ಶಾಂತಿ ಮತ್ತು ಭದ್ರತೆಗೆ ಅಡ್ಡಿಯುಂಟುಮಾಡುವ ಉಗ್ರಗಾಮಿಗಳ ದುಷ್ಟ ಚಟುವಟಿಕೆಗಳು ಒಂದು ಹಂತವನ್ನು ತಲುಪಿದ್ದು, ನಿರ್ಣಾಯಕ ಹೆಜ್ಜೆಗಳನ್ನು ಇರಿಸಬೇಕೆಂದು ಸರ್ಕಾರ ನಂಬಿರುವುದಾಗಿ ಅವರು ಹೇಳಿದ್ದಾರೆ.
'ನಮ್ಮ ತಾಯ್ನಾಡಿನ ಗೌರವ, ಘನತೆ ಮರುಸ್ಥಾಪನೆಗೆ ಮತ್ತು ನಮ್ಮ ಜನರ ರಕ್ಷಣೆಗೆ ಉಗ್ರಗಾಮಿಗಳ ನಿರ್ಮೂಲನೆಗೆ ಶಸಸ್ತ್ರ ಪಡೆಗಳನ್ನು ಕರೆಸಲಾಗಿದೆ' ಎಂದು ಜರ್ದಾರಿ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಮಾತುಕತೆ ನಡೆಸಿದ ಬಳಿಕ ಗಿಲಾನಿ ಹೇಳಿದ್ದಾರೆ.
ಸರ್ಕಾರದ ಕ್ರಮಕ್ಕೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಕಯಾನಿ, ಸೇನೆಯ ಉನ್ನತಾಧಿಕಾರಿಗಳ ಸಭೆ ಕರೆದು ಉಗ್ರಗಾಮಿಗಳ ವಿರುದ್ಧ ನಿರ್ಣಾಯಕ ಮೇಲುಗೈಗೆ ಅಗತ್ಯ ಸಂಪನ್ಮೂಲಗಳು ಬೇಕಾಗಿದೆಯೆಂದು ಹೇಳಿದ್ದಾರೆ. |