ಪ್ರಸಕ್ತ ಹಂದಿ ಜ್ವರವು ಸರ್ವವ್ಯಾಪಿಯಾಗಿ ಹರಡಿದರೆ ಎರಡು ವರ್ಷಗಳವರೆಗೆ 2 ಶತಕೋಟಿ ಜನರಿಗೆ ಸೋಂಕುಪೀಡಿತರಾಗುತ್ತಾರೆಂದು ವಿಶ್ವ ಆರೋಗ್ಯ ಸಂಸ್ಥೆ ಶಂಕೆ ವ್ಯಕ್ತಪಡಿಸಿದೆ.
ಡಬ್ಲ್ಯುಎಚ್‌ಒ ಫ್ಲೂ ಮುಖ್ಯಸ್ಥ ಕೈಜಿ ಫುಕುಡಾ ವಿಶ್ವದ ಜನಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಜನರು ಸೋಂಕಿಗೆ ತುತ್ತಾಗುತ್ತಾರೆಂದು ಫ್ಲೂ ಸಾಂಕ್ರಾಮಿಕದ ಐತಿಹಾಸಿಕ ದಾಖಲೆ ರುಜುವಾತು ಮಾಡಿರುವುದಾಗಿ ಹೇಳಿದ್ದಾರೆ.
ಹಂದಿ ಜ್ವರದಿಂದ ತತ್ತರಿಸಿರುವ ಮೆಕ್ಸಿಕೊದಲ್ಲಿ ಹೈಸ್ಕೂಲು ಮತ್ತು ವಿವಿಗಳು ಪ್ರಥಮಬಾರಿಗೆ ಆರಂಭವಾಗಿದ್ದು, ಸಾಂಕ್ರಾಮಿಕವು ಇಳಿಮುಖವಾಗಿದೆಯೆಂದು ಸರ್ಕಾರದ ಉನ್ನತ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ವಿದ್ಯಾರ್ಥಿಗಳನ್ನು ಹಂದಿ ಜ್ವರದ ಲಕ್ಷಣಗಳಿರುವ ಬಗ್ಗೆ ತಪಾಸಿಸಿ, ಕೆಲವರನ್ನು ಮನೆಗೆ ಕಳಿಸಲಾಗಿದೆ. ಪ್ರಸಕ್ತ ಒಟ್ಟು ಜನಸಂಖ್ಯೆ 6 ಬಿಲಿಯಕ್ಕಿಂತ ಹೆಚ್ಚಿಗೆಯಿದ್ದು, ಸುಮಾರು 23 ಬಿಲಿಯ ಜನರು ಸೋಂಕಿಗೆ ಈಡಾಬಹುದೆಂದು ಅವರು ಹೇಳಿದ್ದಾರೆ. ಆದರೆ ಮುಂಚಿನ ಪೀಳಿಗೆಗಳಲ್ಲಿ ಹರಡಿದ ಸಾಂಕ್ರಾಮಿಕ ಜಾಡ್ಯಗಳ ಬಳಿಕ ವಿಶ್ವದಲ್ಲಿ ಬದಲಾವಣೆಯಾಗಿದ್ದು, ಇದರ ಪರಿಣಾಮ ತೀಕ್ಷ್ಣ ಅಥವಾ ಸಣ್ಣದೆಂದು ಹೇಳಲು ತಜ್ಞರು ವಿಫಲರಾಗಿದ್ದಾರೆಂದು ಅವರು ನುಡಿದರು. |