ಬ್ರಿಟನ್ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಖ್ ಪೊಲೀಸ್ ಅಧಿಕಾರಿಗಳು ತಾವು ಪಿಸ್ತೂಲು ಘಟಕಗಳಲ್ಲಿ ಕೆಲಸ ಮಾಡುವಾಗ ಬಳಸಲು ವಿಶೇಷ ಗುಂಡುನಿರೋಧಕ ಪೇಟಗಳನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ನೂತನವಾಗಿ ರಚಿತವಾದ ಬ್ರಿಟನ್ ಪೊಲೀಸ್ ಸಿಖ್ ಅಧಿಕಾರಿಗಳ ಸಂಘ ಈ ಬೇಡಿಕೆಯನ್ನು ಸಲ್ಲಿಸಿದ್ದು, ತಮ್ಮ ಪೇಟಗಳ ಮೇಲೆ ಸುರಕ್ಷತೆಯ ಹೆಲ್ಮೆಟ್‌ಗಳು ಸೂಕ್ತವಾಗಿ ಹೊಂದುವುದಿಲ್ಲ ಎಂದು ಹೇಳಿದ್ದಾರೆ. ಕೋವಿಗಳ ಘಟಕದ ಅಧಿಕಾರಿಗಳಾಗಿ ಕೆಲಸ ಮಾಡಲು ಸಿಖ್ ಅಧಿಕಾರಿಗಳಿಗೆ ನಿಷೇಧ ವಿಧಿಸಲಾಗಿದೆ.
ಏಕೆಂದರೆ ನಮ್ಮ ಧರ್ಮವು ಪೇಟವನ್ನು ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಸಿಖ್ ಸಂಘದ ಉಪಾಧ್ಯಕ್ಷ ಇನ್ಸ್‌ಪೆಕ್ಟರ್ ಜಿಯಾನ್ ಸಿಂಗ್ ಚಾಹಲ್ ತಿಳಿಸಿದ್ದಾರೆ. ಇಂತಹ ವಸ್ತುವನ್ನು ಅಭಿವೃದ್ಧಿಪಡಿಸಿ ಪೊಲೀಸ್ ಪಡೆಯಲ್ಲಿ ಜಾರಿಗೆ ತಂದರೆ ಸಿಖ್ ಅಧಿಕಾರಿಗಳಲ್ಲಿ ಕೆಲವು ಪ್ರಮಾಣದ ರಕ್ಷಣೆ ಸಿಕ್ಕಂತಾಗಿ, ಪಿಸ್ತೂಲು ಘಟಕಗಳ ಕರ್ತವ್ಯದಲ್ಲಿ ಭಾಗಿಯಾಗಬಹುದು ಎಂದು ಅವರು ಹೇಳಿದ್ದಾರೆ. |