ರಾಷ್ಟ್ರದ ಅತ್ಯಂತ ದೊಡ್ಡ ವೀಸಾ ಹಗರಣವನ್ನು ಅಕ್ರಮವಾಗಿ ನಡೆಸುತ್ತಿದ್ದ ಆರೋಪದ ಮೇಲೆ ಮೂವರು ಅಕ್ರಮ ಭಾರತೀಯ ವಲಸೆಗಾರರು ವಿಚಾರಣೆ ಎದುರಿಸಲಿದ್ದಾರೆ.
ಜತೀಂದರ್ ಶರ್ಮಾ(44), ನೀಲಂ ಶರ್ಮಾ(39) ಮತ್ತು ರಾಖಿ ಶಾಹಿ(32) ಅವರು ವಂಚನೆಯ ಕಾರ್ಖಾನೆಯೊಂದನ್ನು ನಡೆಸಿ, ನಕಲಿ ದಾಖಲೆಗಳು ಸೇರಿದಂತೆ ಸಿವಿಗಳು ಮತ್ತು ವಿವಿ ನಕಲಿ ಡಿಗ್ರಿಗಳನ್ನು ಸೃಷ್ಟಿಸಿ ಅಕ್ರಮ ವಲಸೆಗಾರರಿಗೆ ಮಾರಾಟ ಮಾಡಿದ್ದರು. ಅಕ್ಟೋಬರ್ 2006 ಮತ್ತು ಕಳೆದ ವರ್ಷದ ಮೇ ನಡುವೆ ಯೂನಿವೀಸಾ ಎಂಬ ಕಂಪೆನಿ 900ಕ್ಕೂ ಹೆಚ್ಚು ವೀಸಾ ಅರ್ಜಿಗಳನ್ನುನಕಲಿ ದಾಖಲೆಗಳ ಸಮೇತ ಗೃಹಕಚೇರಿಗೆ ಸಲ್ಲಿಸಿತ್ತು.
ಈ ಅವಧಿಯಲ್ಲಿ ಗೃಹಕಚೇರಿ ಹಿಂದೆಂದೂ ಸ್ವೀಕರಿಸದಿರುವ ಅತೀ ದೊಡ್ಡ ಪ್ರಮಾಣದ ವೀಸಾ ಅರ್ಜಿಗಳನ್ನು ಸ್ವೀಕರಿಸಿ ಅತ್ಯಂತ ದೊಡ್ಡ ವಲಸೆ ಹಗರಣವೆಂದು ಬಣ್ಣಿತವಾಯಿತು ಎಂದು ಪ್ರಾಸಿಕ್ಯೂಷನ್ ಪರ ಫ್ರಾನ್ಸಿಸ್ ಶೆರಿಡಾನ್ ತಿಳಿಸಿದರು. ಗೃಹಕಚೇರಿಯು ನಮ್ಮ ದಾಖಲೆಗಳನ್ನು ನೋಡುವ ಗೋಜಿಗೆ ಹೋಗುವುದಿಲ್ಲ. ಅವರು ಕುರುಡಾಗಿ ಸ್ಟಾಂಪ್ ಮಾಡುತ್ತಾರೆಂದು ಶರ್ಮಾ ತನ್ನ ಅಭ್ಯರ್ಥಿಗೆ ತಿಳಿಸಿದ್ದಾರೆಂದು ಆರೋಪಿಸಲಾಗಿದೆ.
|