ತಾಲಿಬಾನ್ ಉಗ್ರಗಾಮಿಗಳ ವಿರುದ್ಧ ಸರ್ವ ಶಕ್ತಿ ಉಪಯೋಗಿಸಿ ಯುದ್ಧ ಹೂಡುವುದಾಗಿ ಪಾಕಿಸ್ತಾನ ಅಧ್ಯಕ್ಷ ಅಸೀಪ್ ಅಲಿ ಜರ್ದಾರಿ ತಿಳಿಸಿದ್ದು, ಮಿಲಿಟರಿ ಕಾರ್ಯಾಚರಣೆಯಲ್ಲಿ ಉಗ್ರಗಾಮಿಗಳನ್ನು ಸರ್ವನಾಶ ಮಾಡುವುದಾಗಿ ಪಣತೊಟ್ಟಿದ್ದಾರೆ. ಇದೊಂದು ಕಾರ್ಯಾಚರಣೆ ಹಾಗೂ ಸಮರವಾಗಿದ್ದು, ಅವರು ನಮ್ಮ ಸೈನಿಕರನ್ನು ಕೊಲ್ಲುವಾಗ ನಾವೂ ಕೂಡ ಅವರನ್ನು ಕೊಲ್ಲುತ್ತೇವೆ ಎಂದು ವಾಷಿಂಗ್ಟನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಿಬಿಎಸ್ ಪಬ್ಲಿಕ್ ಟೆಲಿವಿಷನ್‌ಗೆ ತಿಳಿಸಿದರು. ಉಗ್ರಗಾಮಿಗಳ ನಿರ್ಮೂಲನೆ ಪಾಕಿಸ್ತಾನದ ಗುರಿಯೆಂದರೆ ಅವರನ್ನು ಕೊಲ್ಲುವುದೇ ಎಂದು ಪ್ರಶ್ನಿಸಿದಾಗ, ಜರ್ದಾರಿ ಹೌದೆಂದು ಸ್ಥಿರಪಡಿಸಿದರು.ವಾಯವ್ಯ ಸ್ವಾತ್ ಕಣಿವೆಯಲ್ಲಿ ಯುದ್ಧವಿಮಾನಗಳು ಬಂಡುಕೋರರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದು, ಅಲ್ಲಿ ಉಗ್ರಗಾಮಿಗಳ ನಾಮಾವಶೇಷಕ್ಕೆ 15,000 ಪಡೆಗಳನ್ನು ಆದೇಶದನ್ವಯ ನಿಯೋಜಿಸಲಾಗಿದೆ. 140ಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಕೊಂದಿರುವುದಾಗಿ ಮಿಲಿಟರಿ ತಿಳಿಸಿದೆ. ಭೀಕರ ಬಾಂಬ್ ದಾಳಿಯಲ್ಲಿ ನಾಗರಿಕರನ್ನು ಕೂಡ ಮಿಲಿಟರಿ ಕೊಂದಿದೆಯೆಂದು ಸ್ವಾತ್ ಕಣಿವೆಯಿಂದ ಪಲಾಯನ ಮಾಡಿದ ಜನರು ದೂರಿದ್ದಾರೆ. ಭಾರತದ ಗಡಿಯಲ್ಲಿರುವ ಖಚಿತವಾಗಿ ನಮೂದಾಗದ ಪಡೆಗಳನ್ನು ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸ್ಥಳಾಂತರಿಸಲಾಗಿದೆ. |