ಶ್ರೀಲಂಕಾ ಪಡೆಗಳು ಎಲ್‌ಟಿಟಿಇಯನ್ನು ಪುಡಿಗಟ್ಟುತ್ತಿರುವುದರೊಂದಿಗೆ, ಭಾರತದಲ್ಲಿ ತಾತ್ವಿಕ ಬೆಂಬಲ ಮತ್ತು ತರಬೇತಿ ಮೂಲಸೌಲಭ್ಯ ಹೊಂದಿರುವುದರೊಂದಿಗೆ ತಾಲಿಬಾನ್ ಮತ್ತು ಅಲ್ ಖಾಯಿದಾ ರೀತಿಯಲ್ಲಿ ಭಾರತವನ್ನು ಬಳಸಿಕೊಳ್ಳುತ್ತಿದೆಯೆಂದು ಪ್ರಮುಖ ಅಮೆರಿಕ ಚಿಂತಕರ ಚಾವಡಿ ತಿಳಿಸಿದೆ.
ತಮಿಳುನಾಡಿನಲ್ಲಿ ಬೆಂಬಲವೆಂದರೆ ವ್ಯಾಘ್ರಗಳು ಅಂತಾರಾಷ್ಟ್ರೀಯ ಗಡಿಯನ್ನು ಅವರ ಅನುಕೂಲಕ್ಕಾಗಿ ದುರ್ಬಳಕೆ ಮಾಡುತ್ತಿದ್ದಾರೆಂದು ಅರ್ಥ. ತಾಲಿಬಾನ್ ಮತ್ತು ಅಲ್ ಖಾಯಿದಾ ಪಾಕಿಸ್ತಾನವನ್ನು ಬಳಸಿಕೊಂಡ ಮಾದರಿಯಲ್ಲೇ ತಮಿಳು ವ್ಯಾಘ್ರಗಳು ಭಾರತವನ್ನು ಬಳಸಿಕೊಳ್ಳುತ್ತಿದೆಯೆಂದು ಸ್ರ್ಟಾಟ್‌ಫರ್ ತನ್ನ ಇತ್ತೀಚಿನ ಶ್ರೀಲಂಕಾದಲ್ಲಿ ಸಂಘರ್ಷ: ಒತ್ತಲ್ಪಟ್ಟ ವ್ಯಾಘ್ರಗಳು ಇನ್ನೂ ಮಾರಕ" ಎಂಬ ವರದಿಯಲ್ಲಿ ತಿಳಿಸಿದೆ.
ವ್ಯಾಘ್ರಗಳಿಗೆ ಭಾರತದ ತರಬೇತಿ ಮೂಲಸೌಲಭ್ಯ ಮತ್ತು ಬೆಂಬಲವು ಶ್ರೀಲಂಕಾ ಸರ್ಕಾರ ಅವರನ್ನು ಸದೆಬಡಿಯುವಾಗ ವಿಶೇಷವಾಗಿ ಮುಖ್ಯವಾಗಿದೆ. ವ್ಯಾಘ್ರಗಳು ಭಾರತದ ಇತರೆ ಉಗ್ರಗಾಮಿ ಗುಂಪುಗಳ ಜತೆ ವ್ಯವಹರಿಸುತ್ತಿರುವ ಇತಿಹಾಸ ಹೊಂದಿರುವುದಾಗಿ ಅದು ತಿಳಿಸಿದೆ.ಭಾರತದ ಉಗ್ರಗಾಮಿ ಗುಂಪುಗಳು ಮತ್ತು ಎಲ್‌ಟಿಟಿಇ ನಡುವೆ ಸಹಕಾರವು ಸೈದ್ಧಾಂತಿಕ ಆಧಾರಿತವಾಗಿಲ್ಲ.
ಶಸ್ತ್ರಾಸ್ತ್ರಗಳು ಮತ್ತಿತರ ಸಾಮಗ್ರಿಗಳ ಕಳ್ಳಸಾಗಣೆಗೆ ಗುಂಪುಗಳ ಸಾಮರ್ಥ್ಯ ವೃದ್ಧಿ ಮುಂತಾದ ಪರಸ್ಪರ ಅನುಕೂಲಕ್ಕಾಗಿ ಸಹಕಾರ ಬೆಸೆದಿವೆ. ಲಂಕಾದ ಪಡೆಗಳು ವ್ಯಾಘ್ರಗಳ ಮಿಲಿಟರಿ ಶಕ್ತಿಯ ಪಳೆಯುಳಿಕೆಯನ್ನು ಸದೆಬಡಿಯಲು ಶಕ್ತವಾದರೆ ಸಾಂಪ್ರದಾಯಿಕ ಯುದ್ಧವನ್ನು ಎಲ್‌ಟಿಟಿಇ ಸದ್ಯಕ್ಕೆ ಕೈಬಿಡುತ್ತದೆಂದು ಸ್ಟ್ರಾಟ್‌ಫರ್ ಅಭಿಪ್ರಾಯಪಟ್ಟಿದೆ. |