ಮಾನವ ಹಕ್ಕುಗಳ ರಕ್ಷಣಾ ಸಂಘಟನೆ ಕಾರ್ಯಕರ್ತ ವಿನಾಯಕ್ ಸೇನ್ ಅವರ ಬಂಧನವನ್ನು ಬ್ರಿಟನ್ ಸಂಸತ್ ಸದಸ್ಯರ ಒಕ್ಕೂಟ ಖಂಡಿಸಿದ್ದು, ಅವರ ಬಿಡುಗಡೆಗೆ ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಜಾಗತಿಕ ಆರೋಗ್ಯ ಮತ್ತು ಮಾನವ ಹಕ್ಕು ರಕ್ಷಣೆಗೆ 2008ರ ಜೊನಾಥನ್ ಮಾನ್ ಪ್ರಶಸ್ತಿ ಪುರಸ್ಕೃತರಾದ ಸೇನ್ ಬಂಧನವು ರಾಜಕೀಯ ಪ್ರಚೋದಿತ ಸುಳ್ಳು ಆರೋಪಗಳಿಂದ ಕೂಡಿರುವುದಾಗಿ ಆರೋಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಚತ್ತೀಸ್‌ಗಢದ ಜೈಲಿನಲ್ಲಿ ಕೊಳೆಯುತ್ತಿರುವ ಸೇನ್ ಅವರ ಬಿಡುಗಡೆಗೆ ಮನಮೋಹನ್ ಸಿಂಗ್ ಮಧ್ಯಸ್ಥಿಕೆ ವಹಿಸಬೇಕೆಂದೂ ಅವರು ಆಗ್ರಹಿಸಿದ್ದಾರೆ.
ಮೇ 14ರಂದು ಮಾನವ ಹಕ್ಕು ಸಂಘಟನೆ ಕಾರ್ಯಕರ್ತರು ವಿನಾಯಕ್ ಸೇನ್ ಬಂಧನದ ಎರಡನೇ ವಾರ್ಷಿಕದ ಸಂಕೇತವಾಗಿ ಭಾರತದ ಹೈಕಮೀಷನ್ ಎದುರು ಪ್ರತಿಭಟನೆ ನಡೆಸಲು ಯೋಜಿಸಿದೆ. ವಿನಾಯಕ್ ಸೇನ್‌ರನ್ನು ಈಗ ಬಿಡುಗಡೆ ಮಾಡಿ ಆಂದೋಳನವು ಪ್ರತಿಭಟನೆಯನ್ನು ಆಯೋಜಿಸಿದೆ.
|