ಉತ್ತರ ಯುದ್ಧ ವಲಯದಲ್ಲಿ ಶ್ರೀಲಂಕಾ ಪಡೆಗಳಿಂದ ಭಾರೀ ಫಿರಂಗಿ ದಾಳಿಯಲ್ಲಿ ಕನಿಷ್ಠ 257 ನಾಗರಿಕರು ಹತರಾಗಿದ್ದು, 814 ಮಂದಿ ಗಾಯಗೊಂಡಿರುವ ಬೀಭತ್ಸ ಸಂಗತಿಯನ್ನು ಅಲ್ಲಿನ ಆರೋಗ್ಯಾಧಿಕಾರಿಯೊಬ್ಬರು ಬಯಲು ಮಾಡಿದ್ದಾರೆ.
ಆದರೆ ಶ್ರೀಲಂಕಾ ಮಿಲಿಟರಿ ಮಾತ್ರ ತಾನು ನಡೆಸಿರುವ ದಾಳಿಯನ್ನು ಮರೆಮಾಚುತ್ತಿದ್ದು, ಬಂಡುಕೋರ ಗುಂಪಿನ ಮೂಲೋತ್ಪಾಟನೆಗೆ ಸಣ್ಣ ಶಸ್ತ್ರಗಳನ್ನು ಮಾತ್ರ ಬಳಸುತ್ತಿರುವುದಾಗಿ ಹೇಳಿದೆ.
ಶನಿವಾರ ತಡವಾಗಿ ಆರಂಭವಾದ ಫಿರಂಗಿ ದಾಳಿಯು ಭಾನುವಾರ ಮುಂಜಾನೆವರೆಗೆ ಮುಂದುವರೆದು ಅನೇಕ ಮಂದಿ ನಾಗರಿಕರು ಹತರಾಗಿದ್ದು, ಮೃತರನ್ನು ಬಂಧುಗಳು ಸಮಾಧಿ ಮಾಡಿದ್ದಾರೆಂದು ವೈದ್ಯ ವಿ. ಶಣ್ಮಗುರಾಜಾ ಶಂಕಿಸಿದ್ದಾರೆ.
ಯುದ್ಧವಲಯದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಪರಿಸ್ಥಿತಿ ತೀರಾ ಗಂಭೀರವಾಗಿದೆಯೆಂದು ಹೇಳಿದ್ದಾರೆ.
|