ಶ್ರೀಲಂಕಾದ ಉತ್ತರ ಭಾಗ ಪ್ರದೇಶವಾದ ಕಾರೆಮುಲೈಕ್ಕಾಲ್ ಎಂಬಲ್ಲಿ ತಮಿಳು ಬಂಡುಕೋರರ ವಿರುದ್ಧ ಲಂಕಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್‌ಟಿಟಿಇ ನೌಕಾಪಡೆಯ ಉಪಮುಖ್ಯಸ್ಥ ಚೆಳಿಯಾನ್ ಹತ್ಯೆಗೀಡಾಗಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾದ ಯುದ್ಧಪೀಡಿತ ಪ್ರದೇಶದಲ್ಲಿ ಎಲ್‌ಟಿಟಿಇ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಲಂಕಾ ಸೇನೆ ತೀವ್ರಗೊಳಿಸಿದೆ. |