ಪಾಕಿಸ್ತಾನದ ಅಣ್ವಸ್ತ್ರಗಳ ಸುರಕ್ಷತೆ ಮತ್ತು ಭದ್ರತೆ ಕುರಿತು ಅಮೆರಿಕದ ಮಿಲಿಟರಿಯ ಉನ್ನತಾಧಿಕಾರಿ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ನಿಯಂತ್ರಣದಲ್ಲಿರುವ ಅಣ್ವಸ್ತ್ರಗಳು ಮತ್ತು ಸ್ಥಾವರಗಳ ಭದ್ರತಾ ವಿಧಿವಿಧಾನಗಳ ಬಗ್ಗೆ ನಮಗೆ ವಿಶ್ವಾಸವಿದ್ದು, ಆ ನೆಲೆಗಳಿಗೆ ಸೂಕ್ತವಾದ ಭದ್ರತೆ ಕಲ್ಪಿಸಲಾಗಿದೆಯೆಂದು ನಂಬಿರುವುದಾಗಿ ಜನರಲ್ ಡೇವಿಡ್ ಪೆಟ್ರಾಸ್ ಸಂದರ್ಶನವೊಂದರಲ್ಲಿ ಫಾಕ್ಸ್ ನ್ಯೂಸ್‌ಗೆ ಹೇಳಿದ್ದಾರೆ.
ಅಮೆರಿಕ ಸೆಂಟ್ರಲ್ ಕಮಾಂಡ್ ದಂಡಾಧಿಕಾರಿಯಾದ ಪೆಟ್ರಾಸ್, ಪಾಕಿಸ್ತಾನದ ಭವಿಷ್ಯಕ್ಕೆ ಮುಂದಿನ ಎರಡು ವಾರಗಳು ನಿರ್ಣಾಯಕವೆಂದು ಹೇಳಿದ್ದಾಗಿ ಅಮೆರಿಕ ಮಾಧ್ಯಮದಲ್ಲಿ ವರದಿಯಾಗಿತ್ತು.ತಾವು ಹೇಳಿದ್ದು ನಿಖರವೆಂದು ಸಾಬೀತಾಗಿದೆ.
'ಈಗ ಪಾಕಿಸ್ತಾನ ಸರ್ಕಾರ, ಜನತೆ ಎಲ್ಲರೂ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನಿ ತಾಲಿಬಾನಿಗಳು ಒಡ್ಡಿದ ಪಾಕಿಸ್ತಾನದ ಅಸ್ತಿತ್ವಕ್ಕೆ ಬೆದರಿಕೆಯನ್ನು ನಿವಾರಿಸುವ ಪ್ರಯತ್ನದಲ್ಲಿ ಮುಂದಿನ ಕೆಲವು ವಾರಗಳು ಅತೀ ಮುಖ್ಯವಾಗಿದೆ' ಎಂದು ಪೆಟ್ರಾಸ್ ಹೇಳಿದರು. ಅಲ್‌ಖಾಯಿದಾ ಕುರಿತು ಪ್ರಶ್ನೆಗೆ ಉತ್ತರಿಸಿದ ಪೆಟ್ರಾಸ್, ಅಲ್ ಖಾಯಿದಾ ನಾಯಕರು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ಅಡಗಿದ್ದಾರೆ. ಒಸಾಮಾ ಮತ್ತು ಜವಾಹರಿ ಇನ್ನೂ ಅಲ್ ಖಾಯಿದಾ ಉಸ್ತುವಾರಿ ವಹಿಸಿದ್ದಾರೆಂದು ಅವರು ಉತ್ತರಿಸಿದರು. |