ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಅಮೆರಿಕದ ಸಿಐಎ ಮತ್ತು ತಮ್ಮ ರಾಷ್ಚ್ರದ ಗುಪ್ತಚರ ಸಂಸ್ಥೆ ಐಎಸ್‌ಐ ಒಂದುಗೂಡಿ ಸೃಷ್ಟಿಸಿದೆಯೆಂದು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಹೊಸ ಸಂಗತಿಯನ್ನು ಬಹಿರಂಗ ಮಾಡಿದ್ದಾರೆ. 'ಇದು ನಿಮ್ಮ ಗತಕಾಲದ ಭಾಗ ಮತ್ತು ನಮ್ಮ ಗತಕಾಲವೆಂದು ನನ್ನ ಭಾವನೆ. ಐಎಸ್‌ಐ ಮತ್ತು ಸಿಐಎ ಒಂದಾಗಿ ತಾಲಿಬಾನ್‌ನ್ನು ಸೃಷ್ಟಿಸಿತು' ಎಂದು ಜರ್ದಾರಿ ಸಂದರ್ಶನವೊಂದರಲ್ಲಿ ಎನ್‌ಬಿಸಿ ಸುದ್ದಿ ಚಾನೆಲ್‌ಗೆ ತಿಳಿಸಿದ್ದಾರೆ.ಮೇ 7ರಂದು ಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಜರ್ದಾರಿ, ತಾಲಿಬಾನ್‌ಗೆ ಕುಮ್ಮಕ್ಕು ನೀಡುತ್ತಿದ್ದರೆಂದು ಆಪಾದಿಸಲಾದ ಪರ್ವೇಜ್ ಮುಷರಫ್ ಮಿಲಿಟರಿ ಆಡಳಿತಕ್ಕೆ ಅಮೆರಿಕ ಬೆಂಬಲಿಸಿತೆಂದು ಕೂಡ ಜರ್ದಾರಿ ಆರೋಪಿಸಿದರು. ಆದರೆ ಪಾಕಿಸ್ತಾನ ಮಿಲಿಟರಿ ಮತ್ತು ಗುಪ್ತಚರ ಸೇವೆಗಳು ತಾಲಿಬಾನ್ ಬಗ್ಗೆ ಇನ್ನೂ ಸಹಾನುಭೂತಿ ಹೊಂದಿದೆಯೆಂಬ ಜನಪ್ರಿಯ ನಂಬಿಕೆಯನ್ನು ಅವರು ಒಪ್ಪಲಿಲ್ಲ. ಪಾಕಿಸ್ತಾನದ ಸೇನೆಯ ಪ್ರಭಾವಿ ಪಾತ್ರ ಕುರಿತು ಪ್ರಶ್ನಿಸಿದಾಗ, ತಾವು ರಾಷ್ಟ್ರದಲ್ಲಿ ಮಿಲಿಟರಿ ಸೇರಿದಂತೆ ಎಲ್ಲವುದರ ಮೇಲೆ ನಿಯಂತ್ರಣ ಹೊಂದಿರುವುದಾಗಿ ಹೇಳಿದರು. ಇದು ಸಂಸತ್ತಿನ ಸ್ವರೂಪದ ಸರ್ಕಾರವಾಗಿದ್ದು, ತಾವು ಸಂಸತ್ತಿನ ಉತ್ಪಾದನೆಯೆಂದು ಅವರು ನುಡಿದರು. ಇದಕ್ಕೆ ಮುಂಚೆ, ಜರ್ದಾರಿ ಸಂದರ್ಶನವೊಂದರಲ್ಲಿ ಭಾರತ ಪಾಕಿಸ್ತಾನಕ್ಕೆ ಬೆದರಿಕೆಯಲ್ಲವೆಂದು ಹೇಳಿದ್ದರು ಮತ್ತು ತಾಲಿಬಾನ್ ನಿರ್ಮೂಲನೆಗೆ ತಮ್ಮ ಕೆಲವು ಪಡೆಗಳನ್ನು ಭಾರತದ ಗಡಿಯಿಂದ ಪಶ್ಚಿಮದ ಗಡಿಗೆ ಸ್ಥಳಾಂತರಿಸಿದ್ದಾಗಿ ಹೇಳಿದ್ದರು. |