ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶ್ರೀಲಂಕಾ ದಾಳಿಯಲ್ಲಿ 1000 ತಮಿಳರ ಸಾವು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾ ದಾಳಿಯಲ್ಲಿ 1000 ತಮಿಳರ ಸಾವು?
ಶ್ರೀಲಂಕಾದ ಉತ್ತರ ಯುದ್ಧವಲಯದಲ್ಲಿ ಎರಡು ದಿನಗಳ ಕಾಲ ನಡೆದ ಸತತ ಶೆಲ್ ದಾಳಿಗೆ ಕನಿಷ್ಠ 430 ಜನರು ಹತರಾಗಿದ್ದು, ಸಾವಿನ ಸಂಖ್ಯೆ ಬಹುಶಃ 1000ಕ್ಕೆ ಏರಿಕೆಯಾಗಿರುವ ಸಂಭವವಿದೆ ಎಂದು ಆ ಪ್ರದೇಶದಲ್ಲಿರುವ ಸರ್ಕಾರಿ ವೈದ್ಯರು ಸೋಮವಾರ ತಿಳಿಸಿದ್ದಾರೆ.

ಫಿರಂಗಿ ಗುಂಡುಗಳ ಸುರಿಮಳೆಯಿಂದ 100 ಮಕ್ಕಳು ಅಸುನೀಗಿದ್ದು ರಕ್ತಪಾತ ಉಂಟಾಗಿದೆಯೆಂದು ವಿಶ್ವಸಂಸ್ಥೆ ಕೂಗೆಬ್ಬಿಸಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕು ಸಮ್ಮಿಶ್ರಕೂಟವು ಭದ್ರತಾಮಂಡಳಿಯನ್ನು ಭೇಟಿ ಮಾಡಿ ಶ್ರೀಲಂಕಾ ಜತೆ ಔಪಚಾರಿಕ ಮಾತುಕತೆ ನಡೆಸುವಂತೆ ಆಗ್ರಹಿಸಿದೆ. ಶನಿವಾರ ಸಂಜೆಯಿಂದ ಭಾನುವಾರ ಬೆಳಿಗ್ಗೆವರೆಗೆ ಸತತ ಗುಂಡಿನ ದಾಳಿಯಲ್ಲಿ ಕನಿಷ್ಠ 378 ನಾಗರಿಕರು ಸತ್ತಿದ್ದು ಸಾವಿರಾರು ಮಂದಿ ಗಾಯಗೊಂಡಿದ್ದಾರೆಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಬಂಡುಕೋರ ಸಂಬಂಧಿತ ವೆಬ್‌ಸೈಟ್‌ನಲ್ಲಿ ದಾಳಿಗೆ ಸರ್ಕಾರ ಕಾರಣವೆಂದು ದೂಷಿಸಿದ್ದರೆ, ಅಂತಾರಾಷ್ಟ್ರೀಯ ಸಹಾನುಭೂತಿ ಗಳಿಸಿ ಬಲವಂತದ ಕದನವಿರಾಮಕ್ಕಾಗಿ ತಮಿಳು ವ್ಯಾಘ್ರಗಳು ತಮ್ಮ ಪ್ರದೇಶದ ಮೇಲೆ ಶೆಲ್ ದಾಳಿ ನಡೆಸುತ್ತಿದೆಯೆಂದು ಮಿಲಿಟರಿ ಆರೋಪಿಸಿದೆ. ಭಾನುವಾರ ಸಂಜೆ 6 ಗಂಟೆಗೆ ಇನ್ನೊಂದು ಸುತ್ತು, ಮುಂಚಿನದಷ್ಟು ತೀವ್ರತೆಯಿಲ್ಲದ ಗುಂಡುಗಳನ್ನು ಹಾರಿಸಲಾಯಿತೆಂದು ಯುದ್ಧವಲಯದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ.ವಿ. ಶಣ್ಮುಗರಾಜ್ ತಿಳಿಸಿದರು.

ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದೆಂದು ಅವರು ಶಂಕಿಸಿದ್ದಾರೆ. ಸತ್ತವರಲ್ಲಿ ಅನೇಕ ಮಂದಿಯನ್ನು ಬಂಕರ್‌ಗಳಲ್ಲಿ ಜೀವಂತಸಮಾಧಿ ಮಾಡಿ ಬಳಿಕ ಕೊಲ್ಲಲಾಗಿದೆ. ಗಾಯಗೊಂಡ ಅನೇಕ ಮಂದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿಲ್ಲ ಎಂದು ಅವರು ನುಡಿದಿದ್ದಾರೆ. ವೈದ್ಯಕೀಯ ಚಿಕಿತ್ಸೆಯಿಲ್ಲದೇ ಅನೇಕ ಮಂದಿ ಅಸುನೀಗಿದ್ದು, ಗಾಯಗೊಂಡವರ ಸಂಖ್ಯೆಯನ್ನು ಗಮನಿಸಿದರೆ ಸತ್ತವರ ಸಂಖ್ಯೆಯನ್ನು 1000ವೆಂದು ಅಂದಾಜು ಮಾಡಬಹುದೆಂದು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಮಿಳು ನಾಗರಿಕರ ರಕ್ತಪಾತಕ್ಕೆ ವಿಶ್ವಸಂಸ್ಥೆ ಖಂಡನೆ
ಚೀನಾದಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳ ಸರಮಾಲೆ
ಐಎಸ್‌ಐ ಮುಖ್ಯಸ್ಥರ ಭೇಟಿಗೆ ಹೊಸ ಪ್ರಸ್ತಾಪ
ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ 6 ಬಲಿ
ಚಲಿಸುತ್ತಿದ್ದ ರೈಲಿನಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಹಲ್ಲೆ
ಸಿಐಎ ಮತ್ತು ಐಎಸ್‌ಐನಿಂದ ತಾಲಿಬಾನ್ ಸೃಷ್ಟಿ: ಜರ್ದಾರಿ