ತಾಲಿಬಾನ್ ಉಗ್ರಗಾಮಿಗಳ ವಿರುದ್ಧ ಪಾಕಿಸ್ತಾನ ಸೇನೆಯ ಕಾರ್ಯಾಚರಣೆಯಿಂದ ಸ್ವಾತ್ ಕಣಿವೆಯನ್ನು ತೊರೆದ ಅಪಾರ ಸಂಖ್ಯೆಯ ನಿರಾಶ್ರಿತರಿಗೆ ಮಾನವೀಯ ನೆರವು ಒದಗಿಸಲು ಅಮೆರಿಕ ಸಿದ್ದವಿರುವುದಾಗಿ ತಿಳಿಸಿದೆ.
ಈ ಹಂತದಲ್ಲಿ ನಿರಾಶ್ರಿತರ ಅಗತ್ಯಗಳೇನು ಮತ್ತು ನೆರವು ಎಲ್ಲಿ ಸೂಕ್ತವಾಗುತ್ತದೆಂದು ಅಂದಾಜುಮಾಡುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಐಯಾನ್ ಕೆಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ವರದಿಗಾರರಿಗೆ ತಿಳಿಸಿದರು. ನಾವು ಸ್ವಾತ್ ಕಣಿವೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬೆಂಬಲಿಸಿದ್ದು, ಅದರಿಂದ ಉದ್ಭವಿಸುವ ಯಾವುದೇ ರೀತಿಯ ಮಾನವೀಯ ಪರಿಸ್ಥಿತಿಗೆ ನೆರವು ನೀಡಲು ಸಿದ್ಧವಾಗಿರುವುದಾಗಿ ಅವರು ಹೇಳಿದ್ದಾರೆ.
ಸ್ವಾತ್ ಕಣಿವೆಯನ್ನು ಕೈವಶ ಮಾಡಿಕೊಂಡ ತಾಲಿಬಾನ್ ವಿರುದ್ಧ ಪಾಕ್‌ಗೆ ಅಮೆರಿಕ ಒತ್ತಡ ಹೇರಿದ ಫಲವಾಗಿ ಕೈಗೊಂಡ ಮಿಲಿಟರಿ ಕಾರ್ಯಾಚರಣೆಯಲ್ಲಿ ಉದ್ಭವಿಸಿದ ಮಾನವೀಯ ನೆಲೆಯ ಸ್ಥಿತಿಯ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅಧಿಕಾರಿಗಳ ಜತೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು.
ಭಯೋತ್ಪಾದಕರ ವಿರುದ್ಧ ಮಿಲಿಟರಿ ಕ್ರಮದಿಂದ ನಿರಾಶ್ರಿತರಾದ ಜನರಿಗೆ ಎಲ್ಲ ರೀತಿಯ ಮಾನವೀಯ ನೆರವು ಒದಗಿಸಲು ಅಮೆರಿಕ ಸಿದ್ಧವಿರುವುದಾಗಿ ಕ್ಲಿಂಟನ್ ತಿಳಿಸಿದ್ದರು. ನಾವು ಏನೇ ಮಾಡಿದರೂ ಅಧ್ಯ7 ಜರ್ದಾರಿ ಮತ್ತು ಅವರ ಸರ್ಕಾರದ ಜತೆ ನಿಕಟ ಸಮಾಲೋಚನೆ ಬಳಿಕ ಮಾಡುತ್ತೇವಷ್ಟೇ ಎಂದು ಕೆಲ್ಲಿ ನುಡಿದಿದ್ದರು. |